This page has not been fully proofread.

96
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ಅಂಗುಲೀಲಕ್ಷಣ
 
ದೀರ್ಘಾಶ್ಚ ಕಲಮಾಸ್ತಿಃ ತಿರ್ಯಗಷ್ಟಯವೋದರಾಃ ॥57॥
 
ಅಂಗುಲ್ಯಾ ಮಧ್ಯರೇಖಾಯಾಃ ಸಮಾ ಲಕ್ಷಣತಃ ಸ್ಮೃತಾಃ ।
 
ಅರ್ಥ - ಒಂದರ ತುದಿಗೊಂದರಂತೆ ಮೂರು ಭತ್ತಗಳನ್ನು ಉದ್ದವಾಗಿಟ್ಟಾಗ
ಏರ್ಪಡುವ ಅಳತೆ ಅಥವಾ ಎಂಟು ಜವೆಗೋಧಿಯನ್ನು ವೃತ್ತಾಕಾರವಾಗಿಟ್ಟಾಗ
ಏರ್ಪಡುವ ವೃತ್ತದ ಮಧ್ಯಭಾಗದ ವ್ಯಾಸ ಅಥವಾ ಉತ್ತಮಲಕ್ಷಣವುಳ್ಳ ಪುರುಷನ
ಹೆಬ್ಬೆರಳಿನ ಮಧ್ಯಭಾಗದ ರೇಖೆ ಈ ಮೂರೂ ಒಂದಂಗುಲ ಅಳತೆಗೆ
ಸಮವಾಗಿರುತ್ತವೆ.
 
ಪ್ರತಿಮೆಯ ಅಳತೆ
 
ಸ್ವಾಂಗುಲ್ಯಾ ಮಧ್ಯರೇಖಾ ತು ಪ್ರತಿಮಾದಿಷು ಲಕ್ಷಣಮ್ ॥58॥
 
ಹಸಮಧ್ಯೆಚ್ಚಭೇದೇನ ತತ್ತನ್ಮಾನಂ ಸಮಸ್ತಶಃ ।
 
ಪ್ರಾದೇಶಹಸ್ತಪುರುಷಮಾನಂ ಸಾಮಾನ್ಯಲಕ್ಷಣಮ್ ॥59।1
 
ಅರ್ಥ -
 
-
 
ಅದರ ಪ್ರತಿಮೆಯನ್ನು ಅಳೆಯುವಾಗ ಆಯಾಯ ಪ್ರತಿಮೆಯ
ಹೆಬ್ಬೆರಳ ಮಧ್ಯಗೆರೆಯ ಅಳತೆಯನ್ನು ಒಂದಂಗುಲವನ್ನಾಗಿ ತಿಳಿಯಬೇಕು. ಈ
ಅಂಗುಲದಿಂದಲೇ 96 ಅಂಗುಲವಿರುವಂತೆ ನಿರ್ಮಿಸಬೇಕು. ಅಂಗುಲದ
ಅಳತೆಯಲ್ಲಿಯೂ ಪ್ರಸ್ವ-ಮಧ್ಯಮ-ಉತ್ತಮ ಎಂದು ಮೂರು ವಿಧಗಳಿವೆ. ಆರು
ಯವದಷ್ಟು ಅಳತೆಯ ಅಂಗುಲ ಕನಿಷ್ಟವೂ, ಏಳು ಯವದ ಅಳತೆ ಮಧ್ಯಮ,
ಎಂಟು ಯವಗಳ ಅಳತೆಯ ಅಂಗುಲ ಉತ್ತಮ ಎನಿಸಿದೆ. ಅಂಗುಲ ಪ್ರಸ್ವದ್ದಾಗಿ
ದ್ದರೆ ಪ್ರತಿಮೆಯೂ ಚಿಕ್ಕದಾಗುತ್ತದೆ. ಮಧ್ಯಮಾಂಗುಲದಿಂದ ಮಧ್ಯಮ,
ಉತ್ತಮಾಂಗುಲದಲ್ಲಿ ಕಡೆದ ಪ್ರತಿಮೆ ದೊಡ್ಡದಾಗುತ್ತದೆ.
 
1. ಯಜಮಾನನ ಬಲಗೈಯ ಮಧ್ಯಮ ಬೆರಳಿನ ಮಧ್ಯಪರ್ವದ ಮಧ್ಯಗೆರೆಯ ಅಳತೆಯೇ
 
ಅಂಗುಲ.
 
ಕರ್ತುಃ ದಕ್ಷಿಣ ಹಸ್ತಸ್ಯ ಮಧ್ಯಮಾಂಗುಲಿಪರ್ವಣಃ ।
ಮಧ್ಯಸ್ಯ ದೈರ್ತ್ಯಮಾನೇನ ಮಾನಾಂಗುಲಮುದೀರಿತಮ್ ॥
 
- ಗೌತಮೀತಂತ್ರ