This page has been fully proofread once and needs a second look.

ಅರ್ಥ - ಉತ್ಸವಮೂರ್ತಿಗಳಿಗೆ ಅಭಿಷೇಕಮಾಡಲು, ಉಯ್ಯಾಲೆ ಉತ್ಸವಾದಿಗಳನ್ನು ಮಾಡಲು ಅನುಕೂಲವಾಗುವಂತೆ ಸಭಾ- ಮಂಟಪವು ಗರ್ಭಗುಡಿಗೆ ಅಂಟಿಕೊಂಡಿರಬಹುದು ಅಥವಾ ಪ್ರತ್ಯೇಕವಾಗಿಯೂ ಇರಬಹುದು[^1]. ಎರಡು ಮೂರು ಸಭಾ- ಮಂಟಪಗಳೂ ಇರಬಹುದಾಗಿದೆ. ದೇವಾಲಯಕ್ಕೆ ಪ್ರವೇಶ ಮಾಡುವ ಪ್ರಧಾನದ್ವಾರದ ಮೇಲೆಯೂ ಗೋಪುರವನ್ನು ಕಟ್ಟಿಸಿ ಇನ್ನಷ್ಟು ಸುಂದರಗೊಳಿಸಬಹುದು.
 
ಪ್ರಾಕಾರಲಕ್ಷಣ
 
ಪ್ರಾಕಾರವೃತ್ತಯುಕ್ತಂ ವಾ ಸಪ್ತಪ್ರಾಕಾರಮೇವ ವಾ।
ಸದ್ಮವೃತ್ತಂ ಕಿಷ್ಕುಮಾತ್ರಂ ಬಹಿರ್ವಾ ಚತುರಸ್ರಕಮ್ ॥ ೬೮ ॥
 
ಅರ್ಥ - ದೇವಾಲಯಕ್ಕೆ ಒಂದು ಪ್ರದಕ್ಷಿಣ ಪ್ರಾಕಾರವಾಗಲೀ ಏಳುಪ್ರಕಾರಗಳಾಗಲೀ ಇರಬಹುದು. ಪ್ರಾಕಾರವೂ ಸಹ ವೃತ್ತಾ- ಕಾರವಾಗಲೀ, ಚತುರಸ್ರಾಕಾರವಾಗಲೀ ಇರಬಹುದು. ಈ ಪ್ರದಕ್ಷಿಣೆಯ ಪ್ರಾಕಾರವು ಗರ್ಭಗುಡಿಯಿಂದ 42ಅಂಗುಲ ಅಂತರವಿರಬೇಕು.[^2]
 
ಮಂಟಪದ ಲಕ್ಷಣ
 
ತತಃ ಪರಂ ಕಿಷ್ಕುಮಾತ್ರಂ ಸಭಾಯಾ ಅಂತರಂ ಯದಿ।
 
[^1]. ತಿರುಮಲದಲ್ಲಿ ಗರ್ಭಗುಡಿಗೆ ತಗುಲಿಕೊಂಡೇ ತಿರುಮಾ- ಮಣಿ ಸಭಾಮಂಟಪವಿದೆ. ಹಾಗೂ ಕಲ್ಯಾಣೋತ್ಸವಾದಿಗಳಿಗೆ ಪ್ರತ್ಯೇಕವಾದ ಕಲ್ಯಾಣಮಂಟಪವೂ ಇದೆ. ರಂಗನಾಥ ಮಂಟಪ
ಪ್ರತ್ಯೇಕವಾದದ್ದು. ಗರ್ಭಗುಡಿಗೆ ತಗುಲಿಕೊಂಡೇ ಇರುವ ಸಭಾ- ಮಂಟಪವನ್ನು ಅನಂತೇಶ್ವರ ದೇವಾಲಯದಲ್ಲಿ ನೋಡಬಹುದು ಶ್ರೀರಂಗನಾಥದೇವಾಲಯವೂ ಇದೇ ರೀತಿಯದು. ಸಾವಿರಕಂಬ- ಗಳ ಮಂಟಪ ಗರ್ಭಗುಡಿಗೆ ಅಂಟಿಕೊಳ್ಳದೇ ಪ್ರತ್ಯೇಕವಾಗಿಯೇ ಇದೆ.
[^2]. ತಿರುಮಲ ಹಾಗೂ ರಂಗನಾಥದೇವಾಲಯಗಳಲ್ಲಿ ಏಳು ಪ್ರಾಕಾರಗಳಿವೆ. ಶ್ರೀರಂಗದಲ್ಲಿ 'ಸಪ್ತಪ್ರಾಕಾರಪ್ರದಕ್ಷಿಣೆ' ಎಂಬ ಸೇವೆಯನ್ನು ಭಕ್ತರು ಸಲ್ಲಿಸುತ್ತಾರೆ. ತಿರುಮಲ ಹಾಗೂ ಶ್ರೀರಂಗ ದೇವಾಲಯಗಳ ಪ್ರಾಕಾರಗಳು ಚತುರಸ್ರಾಕಾರವಾಗಿವೆ.
ಅನಂತೇಶ್ವರದೇವಾಲಯದಲ್ಲಿ ಒಳಗೆ ಒಂದು ಪ್ರದಕ್ಷಿಣಪ್ರಾಕಾರ ಹಾಗೂ ಹೊರಗೆ ವಿಶಾಲವಾದ ಇನ್ನೊಂದು ಪ್ರಾಕಾರ. ಹೀಗೆ ಎರಡು ಪ್ರಾಕಾರಗಳಿವೆ. ಒಂದರಿಂದ ಏಳರವರೆಗ ಎಷ್ಟಾದರೂ ಇರಬಹುದು ಎಂದರ್ಥ.