Proofing

✦

This page has not been fully proofread.

ಮುನ್ನುಡಿ
ತಂತ್ರಶಾಸ್ತ್ರವನ್ನು ತಿಳಿಯದ ಯಾವನೊಬ್ಬನೂ ತತ್ವಜ್ಞಾನವನ್ನು ಪಡೆಯಲಾರ.
ತಂತ್ರಶಾಸ್ತ್ರದಲ್ಲಿ ಬಿತ್ತರಿಸಿದ ಯಜ್ಞಯಾಗಾದಿಗಳಾಗಲೀ,
ಯಾವುದೋ ಒಂದು ತತ್ವವನ್ನು ತಿಳಿಯಲೆಂದೇ ಆಗಿದೆ ಎಂಬುದನ್ನು ತಂತ್ರಶಾಸ್ತ್ರ
ಅಧ್ಯಯನಶೀಲರು ತಿಳಿಯದೇ ಇರಲಾರರು.
 
ಮಂತ್ರತಂತ್ರಗಳಾಗಲೀ
 
೯
 
ಶ್ರೀಮದಾಚಾರ್ಯರು ತಮ್ಮ ಯಾವುದೇ ತಾಂತ್ರಿಕವಿಷಯವನ್ನು ತಿಳಿಸುವಾಗ
ಪ್ರಧಾನತತ್ವವಾದ ಭಗವತತ್ವವನ್ನು ಹೇಳದೇ ಬಿಟ್ಟಿಲ್ಲ. ತತ್ವಗಳಾಗಲೀ, ತತ್ವ-
ದೇವತೆಗಳಾಗಲೀ, ಪೂಜೆಯಾಗಲೀ, ಪೂಜಾವಿಧಾನವಾಗಲೀ, ಹೋಮಾದಿಗಳಾಗಲೀ,
ಮಂತ್ರ ಜಪವಾಗಲೀ ಭಗವಂತನ ಚಿಂತನೆಯಿಲ್ಲದೇ ಅವರಿಂದ ನಿರೂಪಿತಗಳಾಗಿಲ್ಲ.
ಯಾವ ದೇವತೆಯನ್ನಾಗಲೀ ಕುರಿತು ಯಜ್ಞಯಾಗಾದಿಗಳನ್ನು ಮಾಡಲಿ ಆ ಕರ್ಮವು
ಆಯಾಯ ದೇವತೆಗಳಲ್ಲಿದ್ದು ಶಕ್ತಿ ನೀಡುವ 'ಮಹಾಶಕ್ತಿ' ಎನಿಸುವ ಭಗವಂತನದೇ
ಎಂದು ತಿಳಿಯಿರಿ ಎಂದು ಅಲ್ಲಲ್ಲಿ ತಿಳಿಸುತ್ತಾರೆ.
 
-
 
ಮಂತ್ರ ಜಪಾದಿಗಳಲ್ಲೂ ಭಗವಂತನನ್ನು ಮರೆಯಲಾಗದು ವಿಮುಖ ನ
ಹರೇಃ ಯದಿ(೪/೯೯); ತ್ರಾಣಂ ಚ ಕುರುತೇ. ಈ ಅಂಶವನ್ನು ಮಂತ್ರವಿಧಿಯನ್ನು
ತಿಳಿಸುವ ನಾಲ್ಕನೆಯ ಅಧ್ಯಾಯದಲ್ಲಿ ಕಾಣಬಹುದಾಗಿದೆ. ಈ ಭಾಗದಲ್ಲಿರುವ
'ಸರ್ವವ್ಯಾಧಿವಿನಾಶನಂ', 'ಕಾಮದೋ ಭಯನಾಶನಃ', 'ಸಂಸ್ಕೃತಿರ್ವ್ಯಾಧಿನಾಶನಃ',
'ಸರ್ವೆ ರೋಗಾಃ ಪ್ರಣಶ್ಯಂತಿ' ಇತ್ಯಾದಿವಾಕ್ಯಗಳು ಈ ತಂತ್ರಶಾಸ್ತ್ರದಲ್ಲಿ ಹೇಳಿರುವ
ಯಜ್ಞಯಾಗಾದಿಗಳನ್ನೂ, ಮಂತ್ರಗಳ ಜಪಹೋಮಾದಿಗಳನ್ನೂ ಮಾಡುವವರು ಸಕಲ
ಸಂಸಾರಭಯದಿಂದ ನಿವೃತ್ತರಾಗಿ ಸುಖಿಸುವರು ಎಂದು ತಿಳಿಸುತ್ತವೆ. ಇದರಿಂದಾಗಿ
ತಂತ್ರಪದದ ಅರ್ಥವಾದ 'ತ್ರಾಣಂ ಚ ಕುರುತೇ' ಎಂಬ ಅಂಶ ಈ ತಂತ್ರಸಾರ-
ಸಂಗ್ರಹದಲ್ಲಿ ಹೇಗೆ ಮೂಡಿದೆ ಎಂದು ತಿಳಿಯುತ್ತದೆ.
 
ಈ ರೀತಿಯಾಗಿ 'ತಂತ್ರ'ದ ನಿಜ ಅರ್ಥವನ್ನು ಪೂರ್ಣರೀತಿಯಲ್ಲಿ ನಿರೂಪಿಸಿ
ಅನುಗ್ರಹಿಸಿದ ಶ್ರೀಮದಾಚಾರ್ಯರು ಸಕಲ ಆಕಜನರಿಂದ ಮಾನ್ಯರಾಗಿರುವರು.
 
ಈ ಗ್ರಂಥಕ್ಕೆ ಪೇಜಾವರಮಠಾಧೀಶರಾದ ಪರಮಪೂಜ್ಯ ಶ್ರೀ೧೦೮ ವಿಶ್ವೇಶತೀರ್ಥ
ಶ್ರೀಪಾದಂಗಳವರು ಅನುಗ್ರಹವಚನವನ್ನು ನೀಡಿ ಆಶೀರ್ವದಿಸಿದ್ದಾರೆ. ಅವರಿಗೆ ನನ್ನ
ಹತ್ತೂರ್ವಕ ಪ್ರಣಾಮಗಳನ್ನು ಅರ್ಪಿಸುತ್ತೇನೆ.
 
ಎರಡನೆಯದಾಗಿ ಪರಮಪೂಜ್ಯರೂ, ಶ್ರೀರಾಘವೇಂದ್ರಸ್ವಾಮಿಗಳ ಕರುಣಾಪಾತ್ರರೂ