This page has been fully proofread once and needs a second look.

ವಿಷ್ಣು ಮಂಗಲದಲ್ಲಿ ತೋರಿದ ಅಪೂರ್ವ ಮಹಿಮ

 
ಅಚ್ಚರಿಯ ಸೂಸುತ್ತ ಕೇಳಿದರು ಗುರುಗಳು

"ಭೋಜನಾನಂತರವೂ ಎರಡು ಶತ ಹಣ್ಣುಗಳ
 

ಭುಜಿಸಿ ನಿರ್ಲಿಪ್ತರಾಗಿರುವಿರಲ್ಲಾ

ತೆಳ್ಳಗಿನ ಉದರವು ಪೀನವಾಗಿಲ್ಲ

ಪರಿಶುದ್ಧ ಮನಸುಳ್ಳ ಓ ಪೂರ್ಣ ಪ್ರಜ್ಞರೇ !

ನಿಜವಾದ ಕಾರಣವ ನೀವೆಮಗೆ ತಿಳುಹಿ"
 
॥ ೩೨ ॥
 
"ಅಂಗುಷ್ಠಗಾತ್ರದ ಕಿಡಿಯೊಂದು ಉರಿಯುತ್ತಿದೆ
 

ಜಾಜ್ವಲ್ಯ ಮಾನವದು ಎನ್ನ
ಜಠರದಲಿ
 
ಜಾಜ್ವಲ್ಯ ಮಾನವದು ಎನ್ನ
 

ಹಿತವನ್ನು ನೀಡುವುದು ಎಲ್ಲ ಕಾಲದಿ ನನಗೆ

ಪ್ರಲಯ ಕಾಲದಿ ಅದುವು ಜಗವನ್ನೆ ಸುಡಬಹುದು"

ಇಂತೆಂದು ನುಡಿದರು ಆನಂದ ತೀರ್ಥರು
 

ಎಂದೆಂದು ಶ್ರೀ ಹರಿಯ ಚರಣಸೇವಕರವರು
 
॥ ೩೩ ॥
 
ದಿಗ್ವಿಜಯ ಯಾತ್ರೆಯನ್ನು ಮುಂದುವರಿಸುತಲವರು

ವಿಷ್ಣುಮಂಗಲದಿಂದ ತೆರೆಳಿದರು ಮುಂದೆ

ಹಲವು ಪ್ರದೇಶಗಳ ನದಿಗಳನ್ನು ದಾಟುತ್ತ

ಬಹುಪರಿಯ ಧರ್ಮಗಳ, ಪರಿಪರಿಯ ವಸ್ತುಗಳ

ವಿವಿಧ ಪದ ಅರ್ಥಗಳ ಮತಗಳನ್ನು ಖಂಡಿಸುತ

ಎಲ್ಲ ತಡೆಗಳ ಗೆಲಿದು ಮುನ್ನುಗ್ಗಿ ಹೊರಟರು
 
॥ ೩೪ ॥
 
ಪಯಸ್ವಿನೀ ತೀರದಲ್ಲಿ ದುರ್ಗಾದೇವಿಯ ಸ್ಮರಣೆ
 

 
ಕೇರಳಕೆ ಭೂಷಣವು ನದಿಯೊಂದು ಇಹುದು

"ಪಯಸ್ವಿನೀ" ಎಂಬುವುದು ಈ ನದಿಯ ಹೆಸರು

ಪ್ರವಹಿಸುವ ಹಾದಿಯಲಿ ವೃಕ್ಷಗಳ ಕೆಡಹುವಳು

ತನ್ನಲ್ಲಿ ಮಿಂದವರ ಪರಿಶುದ್ಧ ಮಾಡುವಳು

ಭೂಸುರರು ಅರ್ಚಿಸುವ ಈ ತೀರ್ಥ ಕ್ಷೇತ್ರದಲ್ಲಿ
ಲಿ
ಚಂಡಿಕೆಯು ಜನಿಸುವುದ ಸ್ಮರಣೆ ಮಾಡಿದರು
 
ಐದನೆಯ ಸರ್ಗ / 81
 
32
 
33
 
34
 
35
 
॥ ೩೫ ॥