This page has not been fully proofread.

"ವೇದ ಸಿದ್ಧಾಂತಕ್ಕೆ ಹಲವು ಭಾಷ್ಯಗಳಿಹವು
ಅಧಿಕತಮ ಭಾಷ್ಯಗಳು ವೇದ ಸಮ್ಮತವಲ್ಲ
ಅಂತಿರಲಿ, ಅದರಿಂದ ನಮಗೇನು ಹಾನಿ ?
 
ಪರಮ ಜ್ಞಾನಿಗಳಾದ ಆನಂದ ತೀರ್ಥರೇ !
ಬ್ರಹ್ಮಸೂತ್ರದ ಕಾಂಕ್ಷೆ ಸರಿಯಾಗಿ ತೋರಿಸುವ
ಸತ್ಯನಿಷ್ಠುರವಾದ ಭಾಷ್ಯವನ್ನು ರಚಿಸಿ
 
ಆಶ್ವಯುಜ ಕಾರ್ತಿಕ ಹುಣ್ಣಿಮೆಯ ದಿನದಂದು
ಬೆಳಗುವ ಚಂದ್ರಮನ ಬೆಳಕಿನ ಪರಿಯಲ್ಲಿ
ಸಜ್ಜನರ ಮನದಲ್ಲಿ ಹುದುಗಿದ್ದ ಕಾಂಕ್ಷೆಗಳು
ಪ್ರಕಟವಾಯಿತು ಜೇಷ್ಠಯತಿಗಳ ನುಡಿಯಿಂದ
ಆನಂದ ತೀರ್ಥರ ಮುಖವೆಂಬ ಚಂದ್ರನಿಂ
ಹೊರಬಿತ್ತು ಶ್ರೀ ಹರಿಯ ವ್ಯಾಖ್ಯಾನ ಚಂದ್ರಿಕೆ
 
ಕಾಲ ಪರಿಪಾಲಿಸುವ ತೆಂಕಣದ ದಿಸೆಯಲ್ಲಿ
ವಿಷ್ಣು ಮಂಗಲವೆಂಬ ಗ್ರಾಮವೊಂದುಂಟು
ಗುರುವೊಡನೆ ದಿಗ್ವಿಜಯ ಯಾತ್ರೆಯನ್ನು ಕೈಗೊಂಡು
ಬಂದಿಳಿದರಲ್ಲಿ ಆನಂದ ತೀರ್ಥರು
 
ಜಗಕೆ ಮಂಗಳ ಕೊಡುವ ಶ್ರೀ ಹರಿಯ ಕ್ಷೇತ್ರವದು
ನಮಿಸಿದರು ಭಕ್ತಿಯಲ್ಲಿ ದೇವಸರ್ವೋತ್ತಮಗೆ
 
ದಕ್ಷಿಣ ದಿಗ್ವಿಜಯದ ಆರಂಭ
 
ಭಿಕ್ಷೆಯನ್ನು ಏರ್ಪಡಿಸಿ ಭಿಕ್ಷಾಪ್ರದಾತನು
ಆನಂದ ತೀರ್ಥರನು ಪರಿಕಿಸುವ ಸಲುವಾಗಿ
ಕದಲಿ ಫಲಗಳ ರಾಶಿ ಅವರ ಮುಂದಿರಿಸಿದನು
 
ಎಳ್ಳಷ್ಟು ಕಂಗೆಡದೆ ಆನಂದ ತೀರ್ಥರು
ಹಣ್ಣುಗಳನೆಲ್ಲವನು ಭುಜಿಸಿ ಮುಗಿಸಿದರು
ನೆರೆದಿದ್ದ ಎಲ್ಲ ಜನ ವಿಸ್ಮಯವ ತಾಳಿದರು
 
80 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
28
 
29
 
30
 
31