This page has not been fully proofread.

ಮಧ್ಯಗೇಹರ ಮಧ್ಯದರ್ಶನ
 
ನಂದನನ ದೇಹವದು ಭವ್ಯ ಪಾತ್ರೆಯು ಅಹುದು
ತುಂಬಿಹುದು ಪಾತ್ರೆಯಲ್ಲಿ ತೇಜವೆಂಬುವ ಸುಧೆಯು
ಮಧ್ಯಗೇಹರು ತಮ್ಮ ನಯನಗಳ ಬೊಗಸೆಯಲಿ
ಆ ಸುಧೆಯ ಕುಡಿಕುಡಿದು ತೃಷೆಯ ತಣಿಸಿದರು
ಮಗನ ನುಡಿಯೆಂಬ ಗಡಿಗೆಯಲ್ಲಿ ತುಂಬಿದ್ದ
ಜ್ಞಾನವೆಂಬಮೃತವ ಕರ್ಣದಲ್ಲಿ ಕುಡಿದರು
 
ಅಚ್ಯುತಪ್ರೇಕ್ಷರೂ ಆನಂದ ತೀರ್ಥರೂ
ಸರಸ ಸಂಭಾಷಣೆಯಲ್ಲಿ ತೊಡಗಿದ್ದರೊಮ್ಮೆ
ಪರಿಹಾಸ ದನಿಯಲ್ಲಿ ಗುರುಗಳಿಂತೆಂದರು
"ನಾನೊಂದು ಸಲಹೆಯನ್ನು ನೀಡುವೆನು ನಿಮಗೆ
 
ಬಲ್ಲೆನೆಂಬಿರಿ ನೀವು ಬ್ರಹ್ಮ ಸೂತ್ರಕೆ ಅರ್ಥ
ಉತ್ಕೃಷ್ಟ ಭಾಷ್ಯವನ್ನು ರಚಿಸಿ ಬರೆಯಿರಿ ನೀವೇ''
 
ಭಾಷ್ಯ ರಚಿಸಲು ಪ್ರಾರ್ಥನ
 
ಹಂಸ ಬೇರ್ಪಡಿಸುವುದು ಹಾಲಿನಲ್ಲಿನ ನೀರ
ಅಂತೆಯೇ ಆ ದಿನದಿ ಆನಂದ ತೀರ್ಥರು
ಗುರುವಾಣಿಯಲ್ಲಿನ ಆಕ್ಷೇಪ ತೊರೆದು
ಆದೇಶದಲ್ಲಿನ ಸತ್ವವನ್ನು ಸ್ವೀಕರಿಸಿ
ಆ ಕ್ಷಣವೆ ತಳೆದರು ಭಾಷ್ಯ ರಚನೆಯ ದೀಕ್ಷೆ
ಸಂತರಿಗೆ ಸಂತೋಷ ಸದ್ಗುಣದ ಅಂಶದಲ್ಲಿ
 
ವೈರಾಗ್ಯ, ವೈಯಾತ್ಯ, ಸಾಕ್ಯವೆಲ್ಲವೂ
ಪರಮಹಂಸರಿಗೆಲ್ಲ ರಾಗಿಹವು
 
ಇಂಥ ಸದ್ಗುಣ ಖನಿಯು ಲಿಕುಚ ವಂಶೋದ್ಭವರು
 
ಆಶ್ರಮವ ಅಚ್ಯುತ ಪ್ರೇಕ್ಷರಿಂ ಪಡೆದವರು
ಆನಂದ ತೀರ್ಥರಿಗೂ ಜೇಷ್ಠರೀ ಯತಿಗಳು
ಇಂತು ಅರುಹಿದರವರು ಪರಮ ಭಕ್ತಿಯಲಿ
 
ಐದನೆಯ ಸರ್ಗ / 79
 
24
 
25
 
26
 
27