This page has been fully proofread once and needs a second look.

"ಶಂಕರರ ಭಾಷ್ಯವನು ಖಂಡಿಸಿದಿರಿಂತು

ಅತ್ಯಂತ ಉತ್ಕೃಷ್ಟ ಜ್ಞಾನಿಗಳು ತಾವು

ದೋಷರಹಿತಾರ್ಥಗಳ ಸೂತ್ರಭಾಷ್ಯವ ರಚಿಸಿ

ಉದ್ಧರಿಸಿರೆಮ್ಮನ್ನು ಆಚಾರ್ಯವರ್ಯ'
"
ಇಂತು ಬಿನ್ನಿನೈಸಿದರು ನೆರೆದಿದ್ದ ಮಂದಿ

ಆಚಾರ್ಯ ನುಡಿ ಕೇಳಿ ಅಪ್ರತಿಭರಾಗಿ
 
॥ ೨೦ ॥
 
ಬ್ರಹ್ಮಸೂತ್ರದ ಪ್ರವಚನ
 

 
ಜನರ ಮನವಿಗೆ ಒಲಿದು ಆನಂದತೀರ್ಥರು

ಒಡನೆ ತೊಡಗಿದರವರು ವಾಕ್ಯಾರ್ಥದಲ್ಲಿ

ಕ್ಲಿಷ್ಟ ಶಬ್ದಾರ್ಥಗಳ ಸರಳವಾಗಿರಿಸಿ

ಅವುಗಳನ್ವಯವನ್ನು ಸರಿಯಾಗಿ ಹೊಂದಿಸಿ

ಶೃತಿ ಸ್ಮೃತಿಗೆ ಸಮ್ಮತದ ವ್ಯಾಖ್ಯಾನ ಬಿಡಿಸಿ

ಬ್ರಹ್ಮ ಸೂತ್ರಗಳರ್ಥ ಸ್ಪುಫುಟ ಪಡಿಸಿದರಿನ್ನಷ್ಟು
 
॥ ೨೧ ॥
 
ಪರರಸುಜ್ಞಾನದಲ್ಲಿ ಮಾತ್ಸರ್ಯ ತಳೆದವರು

ತರ್ಕ ಸತ್ಪಥವನ್ನು ತೊರೆದ ದುರ್ಜನರು

ತರ್ಕ ಜಿಜ್ಞಾಸುಗಳು ; ದ್ವೇಷವನು ತೊರೆದವರು

ಈ ಪರಿಯ ವಿಧವಿಧದ ಮಂದಿಗಳನೆದುರಿಸಿ

ತಮ್ಮದೇ ಶೈಲಿಯಲ್ಲಿ ಆನಂದತೀರ್ಥರು

ವಿಜಯವನು ಸಾರಿದರು ನಿರ್ಲಿಪ್ತರಾಗಿ
 
॥ ೨೨ ॥
 
ಸೌಮ್ಯ ಮನಪ್ರವೃತ್ತಿ ಮಧ್ಯಗೇಹರ ಗುಣವು

ಇಂತಿರಲು ಒಮ್ಮೆ, ಆ ತಂದೆ, ಒಂದು ದಿನ

ಮಗನ ಬಳಿಗೈತಂದು ಮುದಗೊಂಡರು

ಹಿಂದೊಮ್ಮೆ ಮಗನಲ್ಲಿ ವಿರಸ ನುಸುಳಿದ್ದರೂ

ಸುಪ್ರಸನ್ನರು ಈಗ, ಮಗನ ಹಿರಿಮೆಯ ಕಂಡು

ಸಜ್ಜನರ ಸದ್ಗುಣಕೆ ಇದು ನಿದರ್ಶನವು
 
78/ ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
20
 
21
 
22
 
23
 
॥ ೨೩ ॥