This page has been fully proofread once and needs a second look.

"ಬುದ್ಧಿ ಸಾಗರ, ವಾದಿಸಿಂಹರು ಲೋಕದೊಳು ಖ್ಯಾತರು

ಭೂಲೋಕದಲ್ಲೆಲ್ಲ ಜಯಭೇರಿ ಹೊಡೆದವರು

ಇಂಥ ಪಂಡಿತರನ್ನು ಕ್ಷಣದಲ್ಲಿ ನಿಗ್ರಹಿಸಿ

ಅದ್ಭುತವ ತೋರಿದರು ಆನಂದ ತೀರ್ಥರು"

ಇಂತೆಂದು ಜನರೆಲ್ಲ ಮೂಕ ವಿಸ್ಮಿತರಾಗಿ

ಕುಣಿದು, ಕೊಂಡಾಡಿದರು ಆಚಾರ್ಯರನ್ನು
 
॥ ೧೬ ॥
 
ಇಂತಿರಲು ಆಚಾರ್ಯ ಆನಂದ ತೀರ್ಥರು

ತರ್ಕ ವಿದ್ಯಾ ನಿಪುಣ ಶಿಷ್ಯರನ್ನು ಕುರಿತು

ಮಣಿಮಂತ ವಿರಚಿತ ಸೂತ್ರಭಾಷ್ಯದ ಬಗ್ಗೆ

ಮೆಲುನಗೆಯ ಸೂಸುವ ಪರಿಹಾಸ ದನಿಯಲ್ಲಿ
 

ನುಡಿದ ಮಾತುಗಳನ್ನು ಆಲಿಸುತ ಆ ಸುರರು

ಪರಿಪರಿಯ ಬಗೆಯಲ್ಲಿ ಆನಂದ ಪೊಂದಿದರು
 
॥ ೧೭ ॥
 
ಶಂಕರ ಭಾಷ್ಯದ ಖಂಡನೆ
 

 
ಶಾಂಕರ ಪ್ರತಿಪಾದ್ಯ ಸೂತ್ರಗಳ ಭಾಷ್ಯ

ಆಭಾಸ, ಮಿಥೈಥ್ಯೆಗಳ ಸರಮಾಲೆಯಹುದು

ಪರಿಶುದ್ಧ ಮತಿಯುಳ್ಳ ಪಂಡಿತರ ಮಾತಿಂದ

ಬ್ರಹ್ಮಸೂತ್ರದ ಭಾವ ನಾವರಿಯಬೇಕು

ದುರ್ಭಾಗ್ಷ್ಯವೆಲ್ಲರಲು ಈಗ ಸತ್ಕ್ರತವು

ಇದು ಎಂಥ ಅಚ್ಚರಿ! ಎಂತಹ ಸೋಜಿಗ!
 
॥ ೧೮ ॥
 
ಇಂತು ಪೇಳುತ ನಮ್ಮ ಆನಂದ ತೀರ್ಥರು

ಆ ಭಾಷ್ಯದಲ್ಲಿನ ಪ್ರಬಲ ದೋಷವನೆಲ್ಲ

ತೆರೆದಿಟ್ಟು ತೋರಿದರು ಮತ್ತೆ ಮತ್ತೆ

ವಿಸ್ಮಯವ ಪೊಂದಿದರು ನೆರೆದ ಪಂಡಿತರೆಲ್ಲ

ಆಚಾರ್ಯ ವಾಣಿಯಲಿ ಹುರುಳಿಲ್ಲವೆಂದು

ವಾದಿಸಲಸಮರ್ಥ ವಾಕ್ಯಾರ್ಥ ನಿಪುಣರು
 
ಐದನೆಯ ಸರ್ಗ / 77
 
16
 
17
 
18
 
19
 
॥ ೧೯ ॥