This page has been fully proofread once and needs a second look.

ಆನಂದ ತೀರ್ಥರ ಜ್ಞಾನಕ್ಕೆ ಬೆರಗಾಗಿ,

ಮೊದಲ ಸೋಲಿಗೆ ಆತ ಧೃತಿಗೆಡದೆ ಮತ್ತೆ

ಮತ್ತೊಂದು ವಿಷಯವನು ವಾದಕ್ಕೆ ಸೂಚಿಸಿದ

ವಿಷಯದಲ್ಲಿ ಹದಿನೆಂಟು ದೋಷಗಳ ತೋರುತ್ತ

ಸಡ್ಡು ಹೊಡೆದನು ಮತ್ತೆ ಆನಂದ ತೀರ್ಥರಿಗೆ

ತವಕಗೊಂಡರು ಮಂದಿ ಆಚಾರ್ಯರುತ್ತರಕೆ
 
॥ ೧೨ ॥
 
ನಕ್ಷತ್ರಗಳಿಗೆಲ್ಲ ವಿಷ್ಣುಪದ ನೆಲೆಯಹುದು
 
-

ಶ್ರೀ
ಹರಿಯ ಚರಣಗಳು ರವಿಕಿರಣಕಾಸರೆಯು
 

ಈ ಕಿರಣ ಕತ್ತಲೆಯ ಬಡಿದು ಓಡಿಸುವಂತೆ

ಶ್ರೀ ಹರಿಯ ವಾಕ್ಯಗಳ ಆಸರೆಯ ಪಡೆದು

ವಾದಿಸಿಂಹನ ಎಲ್ಲ ವೈಕಲ್ಪಗಳಿಗೂ

ವಿವರಣೆಯ ನೀಡಿದರು ಆನಂದ ತೀರ್ಥರು
 
॥ ೧೩ ॥
 
ಜಲಧಿ ಮಿಗಿಲಾಗಿಹುದು ಹಲವು ನದಿ ನಿವಹಕ್ಕೆ

ಆ ಜಲಧಿಯಂತಿಹುದು ಬುದ್ಧಿಸಾಗರ ಪ್ರತಿಭೆ

ಆದರಾ ಪ್ರತಿಭೆಗೆ ಗರ್ವ, ದರ್ಪದ ಕಲುಷ

ಕುಂಭಸಂಭವನೊಮ್ಮೆ ಜಲಧಿಯನು ಕುಡಿದಂತೆ

ಚಾತುರ್ಯ, ಜಾಣೆಣ್ಮೆಗಳ, ಶಾಸ್ತ್ರಗಳ ನೆರವಿಂದ

ಗೆಲಿದರೆದುರಾಳಿಯನು ಆನಂದ ತೀರ್ಥರು
 
॥ ೧೪ ॥
 
ದಿಕ್ಕೆಟ್ಟು ಹೋದರು, ದುರ್ವಾದಿದ್ವಯರು

ನಾಳಿನಲಿ ವಾಕ್ಯಾರ್ಥ ಮುಂದರಿಯಲೆಂದರು

ಸಲಹೆಯನು ವರ್ಜಿಸಿದರಾನಂದ ತೀರ್ಥರು

ಪಂಡಿತರ ಪಾಂಡಿತ್ಯ ಸಂಶಯಕ್ಕೀಡಾಯ್ತು

ನಡುನಿಶೆಯಲಾದ್ವಯರು ಎಲ್ಲಿಗೋ ಓಡಿದರು
 

ಜನಮನದ ಅನುಮಾನ ಇದರಿಂದ ಬಲವಾಯು
 
76 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
12
 
13
 
14
 
15
 
ಯ್ತು ॥ ೧೫ ॥