This page has not been fully proofread.

ಬುದ್ಧಿಸಾಗರನೆಂಬ ವೇದಗಳ ದ್ವೇಷಿಯು
ವಾದಿಸಿಂಹ ಎಂಬ ಮತ್ತೊಬ್ಬನೊಡಗೂಡಿ
ವಾದಿಕರಿನಿಕರಗಳ ಧ್ವಂಸ ಮಾಡುವ ಎಂದು
ತಮ್ಮೊಡನೆ ವಾದಿಸುವ ಪಂಡಿತರ ಅರಸುತ್ತ
ಲೋಕದಲ್ಲೆಡೆಯಲ್ಲೂ ಸಂಚಾರ ಮಾಡುತ್ತ
ರಜತ ಪೀಠಾಪುರಕೆ ಆಗ ಐತಂದನು
 
ವಾದಿಸಿಂಹ ಗ್ರಾಮಸಿಂಹನಾದನು
 
ಪಾಂಡಿತ್ಯಮದದಿಂದ ಗರ್ವಿಷ್ಠರಾದವರ
ಸೊಕ್ಕನಡಗಿಸ ಬಯಸಿ ಅಚ್ಯುತ ಪ್ರೇಕ್ಷರು
ಶಿಷ್ಯನೊಬ್ಬನ ಕಳುಹಿ ರೂಪ್ಯ ಪೀಠಾಪುರಕೆ
 
"ಸುಖತೀರ್ಥ" ವೆಂಬೊಂದು ಬಾಣವನು ತರಿಸಿದರು
 
"ಮಠಾಂತರ' ಎಂಬ ಬತ್ತಳಿಕೆಯಿಂದ
ಬಾಣಪ್ರಯೋಗಕ್ಕೆ ಸನ್ನದ್ಧರಾದರು
 
ವಾಕ್ಯಾರ್ಥ ವೆಂಬೊಂದು ವಿಬುಧ ಯುದ್ಧದಲ್ಲಿ
ಯಾರು ಗೆಲ್ಲುವರೆಂಬ ತವಕದಲ್ಲಿ ಕುಳಿತಿದ್ದ
ಕೌತುಕದ ಮಂದಿಯನು ನಸುನಗುತ ನೋಡುತ್ತ
ತ್ವರಿತ ಗತಿಯಲಿ ಬಂದ ಆನಂದ ತೀರ್ಥರು
ರೂಪ್ಯಾ ಪೀಠಾಲಯದ ದೇವಸನ್ನಿಧಿಯಲ್ಲಿ
 
ಆಸೀನರಾಗಿದ ಗುರುಗಳಿಗೆ ನಮಿಸಿದರು
 
ಗರ್ವಿಷ್ಠನಾದರೂ ಚತುರಮತಿ, ವಾ
ವಾದಿಸಿಂಹನ ವಿದ್ಯೆ ಗಳಿಸಿತ್ತು ಖ್ಯಾತಿ
ಪರ್ವತದ ಝರಿಯಂತೆ ಆತನಾ ವಾಕ್ಸರಣಿ
 
ಂದ ತೀರ್ಥರದು ಮೊನಚಾದ ಅಂಬು
ಖಂಡಿಸಿತು ಪಂಡಿತನ ವಾದವೆಂಬುವ ಗದೆಯ
ತರ್ಕ ವಿಶ್ಲೇಷಣೆಯ ಹರಿತ ಆಯುಧದಿಂದ
 
ಐದನೆಯ ಸರ್ಗ / 75
 
8
 
9
 
10
 
11