This page has been fully proofread once and needs a second look.

ಆನಂದತೀರ್ಥರು ಬಲು ಚತುರ ಮತಿಗಳು

"ಅನುಮಾನದಿಂದಲೇ ಭೇದ ಸಾಧಿಸಬಹುದು"
 

ಎಂಬೊಂದು ಯುಕುತಿಯನು ಚತುರತನದಲ್ಲಿ ಬಳಸಿ
 

ಗೆಲ್ಲ ಬಂದವರನ್ನು ಗೆಲಿದು ಮೆಟ್ಟಿದರು

ಖಗಪತಿಯು ಅಜಗರನ ಅಟ್ಟಿಹೋಗುವ ತೆರದಿ

ಎದುರಾಳಿಗಳಿಗೆಲ್ಲ ಬಿರುಗಾಳಿಯಾದರು
 
॥ ೪ ॥
 
ಹಿಂದಿರುಗಿ ಬಂದರು ಎದುರಾಳಿಗಳು ಮತ್ತೆ

"ಕಂಗಳಿಗೆ ಗೋಚರಿಪ ಜಗವೆಲ್ಲ ಮಿಥ್ಯ

ಶುಕ್ತಿಗಳ ಮೇಲಿರುವ ರಜತ ಲೇಪನದಂತೆ"

"ಈ ಜಗವು ಸತ್ಯ ಘಟಪಟಾದಿಗಳಂತೆ
"
ಅನುಮಾನ ವೆಂಬೊಂದು ತರ್ಕಶಸ್ತ್ರದ ಸಹಿತ

ಖಂಡನವ ಮಾಡಿದರು ಆನಂದ ತೀರ್ಥರು
 
॥ ೫ ॥
 
ಆನಂದ ತೀರ್ಥರ ಪ್ರತಿಭೆಯನ್ನು ಕಂಡು

ಅಪ್ರತಿಭರಾದರು ಮಧ್ವ ಎದುರಾಳಿಗಳು

"ಹೇತುವಿಗೆ ಅತಿವ್ಯಾಪ್ತಿ ದೋಷವಿಹುದೆಂದೆನುತ
 

ಮಧ್ವರನು ತರ್ಕದಲಿ ಗೆಲ್ಲಿ ಗೆಲ್ಲ ಬಯಸಿದರವರು
 
'

"
ಶಕ್ತಿರೂಪಗಳಲ್ಲಿ ದೃಶ್ಯತ್ವವಿಲ್ಲ ಅದರಿಂದಲದು ಅಹುದು ಮಿಥ್ಯಜ್ಞಾನ'
"
ಎಂಬಂಥ ಯುಕ್ತಿಯಲಿ ಮಧ್ವಮುನಿ ಗೆಲಿದರು
 
॥ ೬ ॥
 
"ಅನುಮಾನ ವೆಂಬುದಕೆ ಎರಡು ಅಲಗುಗಳುಂಟು
 

"ಇದು ಮಿಥ್ಯ, ಅದು ಸತ್ಯ" ಎಂಬ ತರ್ಕಗಳನ್ನು

ಸರಿಯಾಗಿ ಸೀಳುವುದಕ್ಕೆ ಸರಿಯಾದ ಶಸ್ತ್ರ

ಪ್ರತ್ಯಕ್ಷ, ಆಗಮ ಪ್ರಾಮಾಣ್ಯ ಸತ್ಯ
"
ಇಂತೆಂದು ವಾದಿಸಿದ ಆನಂದ ತೀರ್ಥರು

ಅನುಮಾನ ತೀರ್ಥರೆಂದೆನಿಸಿದರು ಜಗದಿ
 
74 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
5
 
6
 
7
 
॥ ೭ ॥