2023-02-27 15:12:22 by jayusudindra
This page has been fully proofread once and needs a second look.
ದಿಗ್ಗಜಗಳೂ ಈ ಕೃತಿಯ ಹೆಗ್ಗಳಿಕೆಯನ್ನು ಹಾಡಿ ಹೊಗಳಿದ್ದಾರೆ.
"ಶ್ರೀ ಸುಮಧ್ವವಿಜಯ ಕನ್ನಡ ಕಾವ್ಯ" ಮಾಧ್ಯವಕೃತಿಗಳ ಅನುವಾದ ಕಾವ್ಯದಲ್ಲಿ
ನನ್ನ ಎರಡನೆಯ ಪ್ರಯತ್ನ. ಈಗಾಗಲೇ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ
ಶ್ರೀ
ಹರಿವಾಯುಸ್ತುತಿಯನ್ನು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಹೊರತಂದಿದ್ದೇನೆ .
ಆದರೆ ಕಾರಣಾಂತರಗಳಿಂದ ಈ ಪ್ರಯತ್ನಕ್ಕೆ ನಿರೀಕ್ಷಿಸಿದಷ್ಟು ಪ್ರೋತ್ಸಾಹ ದೊರೆಯಲಿಲ್ಲ.
ಸಹಜವಾಗಿ ಇದರಿಂದ ಸಾಕಷ್ಟು ನಿರಾಸೆಯಾಯಿತಾದರೂ, ಮಾಧ್ಯ ವಕೃತಿರತ್ನವಾದ
'ಸುಮಧ್ವವಿಜಯ'' ವನ್ನು ಕನ್ನಡದಲ್ಲಿ ಪದ್ಯಾನುವಾದ ಮಾಡಬೇಕೆಂಬ ಅದಮ್ಯ ಆಕಾಂಕ್ಷೆ
ನನ್ನಲ್ಲಿ ಬೇರೂರಿತ್ತು. ಆದರೆ ಇಂತಹ ಪ್ರಯತ್ನಗಳಿಗೆ ಸಂಸ್ಕೃತ ಭಾಷಾಜ್ಞಾನ ಅತ್ಯಂತ
ಅವಶ್ಯಕ. ಸಂಸ್ಕೃತ ಭಾಷೆಯ ಮಹಾದ್ವಾರದ ಹೊಸ್ತಲನ್ನೂ ಮುಟ್ಟಲಾಗದುದು ನನ್ನ
ಕೊರತೆ,. ಖ್ಯಾತ ಪಂಡಿತರಾದ ಡಾ ವ್ಯಾಸನಕೆರೆ ಪ್ರಭಂಜನಾಚಾರ್ಯರ ಸುಮಧ್ವ
ವಿಜಯದ ಕನ್ನಡ ಗದ್ಯಾನುವಾದ (ಆನಂದ ತೀರ್ಥ ಪ್ರತಿಷ್ಠಾನ ಬೆಂಗಳೂರು 1994)
ನನ್ನ ಈ ಕೊರತೆಯನ್ನು ನೀಗಿಸಿತು. ಅವರ ಸುಂದರ ಗದ್ಯಶೈಲಿ ಹಾಗೂ ಮೂಲಕೃತಿಗೆ
ಎಳ್ಳಷ್ಟೂ ಚ್ಯುತಿ ಬರದಂತೆ ನಿರೂಪಿಸಿರುವ ಅವರ ಅನುವಾದ ನನ್ನ ನೆರವಿಗೆ ಬಂದಿತು.
ಅವರ ಸುಂದರ ಗದ್ಯಾನುವಾದವನ್ನು ಪದ್ಯರೂಪದಲ್ಲಿಪುಪರಿವರ್ತಿಸಿದ್ದೇನೆ. ಪದ್ಯಗಳ
ಉಪಶೀರ್ಷಿಕೆಗಳನ್ನು ಅವರ ಗ್ರಂಥದಿಂದ ಅನಾಮತ್ತಾಗಿ ಎತ್ತಿದ್ದೇನೆ. ಇದಕ್ಕಾಗಿ ಪ್ರೊ.
ಪ್ರಭಂಜನಾಚಾರ್ಯರಿಗೆ ನಾನು ಕೃತಜ್ಞನಾಗಿದ್ದೇನೆ ನನ್ನ ಈ ಪದ್ಯಾನುವಾದ ಎಷ್ಟರ
ಮಟ್ಟಿಗೆ ಸಫಲಗೊಂಡಿರುವುದೋ ನಾ ಕಾಣೆ. ಇದನ್ನು ಸಹೃದಯ ಜನಗಳ
ಳೇ ನಿರ್ಧರಿಸಬೇಕು.
ಈ ಕೃತಿಯ ರಚನೆಯನ್ನು ಸುಮಾರು ಮೂರು ವರ್ಷಗಳ ಹಿ೦ದೆಯ
ಯೇ
ಪ್ರಾರಂಭಿಸಿದೆನಾದರೂ ಅದರ ಓಟ ಸಾವಕಾಶವಾಗಿಯೆಯೇ ಜರುಗಿತು.
ಶ್ರೀ ಹರಿಯ
ಅನುಗ್ರಹದಿಂದ, ಅನುವಾದ ಕಾರ್ಯವೇನೋ ಸುಲಭವಾಗಿಯೇ ಸಾಗಿತು.
ದಿನವೊಂದಕ್ಕೆ ಏಳೆಂಟು ಶ್ಲೋಕಗಳ ಅನುವಾದವನ್ನು ಮಾಡುವುದು ಸಾಧ್ಯವಾಗಿತ್ತು.
ಆದರೆ ಕೆಲವು ವೈಯಕ್ತಿಕ ಕಾರಣಗಳಿಂದ ಈ ಕಾರ್ಯ ಅನಿವಾರ್ಯವಾಗಿ
ಕುಂಠಿತವಾಯಿತು. ಈ ಮಧ್ಯೆ ನನ್ನ ಎಲ್ಲ ಚಟುವಟಿಕೆಗಳಿಗೂ ಸಂಪೂರ್ಣ ಸಹಕಾರವಿತ್ತು
ನನಗೆ ನೈತಿಕ ಸ್ಥೆಥೈರ್ಯವನ್ನು ನೀಡುತ್ತಿದ್ದ ನನ್ನ ಸಹಧರ್ಮಿಣಿ ಸೌ. ಸರಸ್ವತಿ, ಕ್ಯಾನ್ಸರ್
ಪೀಡಿತಳಾಗಿ ಕೊನೆಗೆ ನನ್ನನ್ನು ಅಗಲಿಹೋದಳು. ಇದರಿಂದಾಗಿ ನಾನು ನನ್ನ ಮಾನಸಿಕ
ಕೈ ಸ್ಥೈರ್ಯವನ್ನು ಮತ್ತೆ ಪಡೆಯಲು ಕೆಲವು ತಿಂಗಳುಗಳೇ ಬೇಕಾದುವು.
ಈ ನನ್ನ ಪ್ರಯತ್ನಕ್ಕೆ ಅನೇಕ ಸಹೃದಯ ಮಿತ್ರರ ಪ್ರೋತ್ಸಾಹ ಹಾಗೂ
ಸದಾಶಯಗಳು ಲಭಿಸಿವೆ. ನನ್ನ ಸನ್ಮಾನ್ಯ ಮಿತ್ರರೂ, ಖ್ಯಾತ ಪಂಡಿತೋತ್ತಮರಾಗಿದ್ದ
ಬಿದರಹಳ್ಳಿ ಶ್ರೀನಿವಾಸ ತೀರ್ಥರ ವಂಶಸ್ಥರೂ ಆದ ಶ್ರೀ ಬಿದರಹಳ್ಳಿ ಶ್ರೀಪತಿ
IS T
"ಶ್ರೀ ಸುಮಧ್ವವಿಜಯ ಕನ್ನಡ ಕಾವ್ಯ" ಮಾಧ್
ಶ್ರೀ
ಅವಶ್ಯಕ. ಸಂಸ್ಕೃತ ಭಾಷೆಯ ಮಹಾದ್ವಾರದ ಹೊಸ್ತಲನ್ನೂ ಮುಟ್ಟಲಾಗದುದು ನನ್ನ
ಅವರ ಸುಂದರ ಗದ್ಯಾನುವಾದವನ್ನು ಪದ್ಯರೂಪದಲ್ಲಿ
ಈ ಕೃತಿಯ ರಚನೆಯನ್ನು ಸುಮಾರು ಮೂರು ವರ್ಷಗಳ ಹಿ೦ದೆ
ಪ್ರಾರಂಭಿಸಿದೆನಾದರೂ ಅದರ ಓಟ ಸಾವಕಾಶವಾಗಿ
ಶ್ರೀ ಹರಿಯ
ನನಗೆ ನೈತಿಕ ಸ್
ಕೈ
ಈ ನನ್ನ ಪ್ರಯತ್ನಕ್ಕೆ ಅನೇಕ ಸಹೃದಯ ಮಿತ್ರರ ಪ್ರೋತ್ಸಾಹ ಹಾಗೂ
ಸದಾಶಯಗಳು ಲಭಿಸಿವೆ. ನನ್ನ ಸನ್ಮಾನ್ಯ ಮಿತ್ರರೂ, ಖ್ಯಾತ ಪಂಡಿತೋತ್ತಮರಾಗಿದ್ದ
I