This page has been fully proofread once and needs a second look.

ಗುರುಗಳಾಣತಿಯಯಯಂತೆ ಎಲ್ಲ ಶಿಷ್ಯರೂ ಕೂಡಿ

ಪಂಚಮ ಸ್ಕಂಧದ ಪ್ರತಿಗಳೆಲ್ಲವ ನೋಡಿ
 

ಓಡೋಡಿ ಬಂದರು ಗುರುಗಳಿಳೆಡೆಗೆ
 

ಪೂರ್ಣ ಪ್ರಜ್ಞರು ನುಡಿದ ಪಂಚಮಸ್ಕಂಧವದು

ವೇದವ್ಯಾಸರ ರಚಿತ ಮೂಲ ಕೃತಿಯಾಗಿತ್ತು!

ಇದ ಕಂಡ ಎಲ್ಲರಿಗೂ ಅಚ್ಚರಿಯೋ ಅಚ್ಚರಿ!
 
॥ ೫೨ ॥
 
ಪೂರ್ಣಪ್ರಜ್ಞರು ಸರ್ವಜ್ಞರು
 

 
"ಓ ಪೂರ್ಣ ಪ್ರಜ್ಞರೆ ! ಗೆಲುವು ನಿಮದಾಯ್ತಂತಿಂದು

ಈ ಜನ್ಮದಲಿ ನೀವು ಒಮ್ಮೆಯೂ ಓದದಿಹ

ಇಂಥ ಗ್ರಂಥವನೆಲ್ಲ ಹೇಗೆ ಅರಿತಿರಿ ? ಹೇಳಿ"

"ಓದಿರುವೆ ಇದನೆಲ್ಲ ಪೂರ್ವ ಜನ್ಮಗಳಲ್ಲೇ

ಧರ್ಮಗ್ರಂಥಗಳೆಲ್ಲ ನಾಲಿಗೆಯಲಿ ನಲಿಯುವುವು"

ಎಂಬ ಮಾತನು ಕೇಳಿ ಚಕಿತಗೊಂಡರು ಗುರುವು
 
॥ ೫೩ ॥
 
ಶ್ರೀ ಮಧ್ಕೀರ್ತಿಯ ವೈಭವ
 

 
ಜಗಕೆಲ್ಲ ಆಚ್ಚರಿಯ ಮೂಡಿಸುವ ಪರಿಯಲ್ಲಿ

ಪರಿಪರಿಯ ರೀತಿಯಲ್ಲಿ ಜ್ಞಾನವನ್ನು ಪಡೆದ

ಪೂರ್ಣ ಪ್ರಜ್ಞರ ಖ್ಯಾತಿ ಎಲ್ಲೆಡೆಯೂ ಹರಡಿತ್ತು

.ಕತ್ತಲೆಯನೋಡಿಸುವ ಸೂರ್ಯನ ಪ್ರಭೆಯಂತೆ

ಸುಜನಾಬ್ ನಿವಹಕೆ ಆನಂದವೀಯುವ

ಚಂದ್ರಮನ ಪರಿಯಾಯ್ತು ಯತಿವರರ ಕೀರುತಿ
 
52
 
70/ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
53
 
54
 
॥ ೫೪ ॥
 
 
 
ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರ

ಶ್ರೀಮನ್ನಾರಾಯಣ ಪಂಡಿತಾಚಾರ್ಯರು ರಚಿಸಿದ ಶ್ರೀ ಸುಮಧ್ವ ವಿಜಯವೆ೦ಬ
ಮಹಾಕಾವ್ಯದ ಆನಂದಾಂಕಿತವಾದ ನಾಲ್ಕನೆಯ ಸರ್ಗದ ಕನ್ನಡ ಪದ್ಯಾನುವಾದ
 
ಸಮಾಪಿಪ್ತಿ.