This page has been fully proofread once and needs a second look.

ಪೂರ್ಣ ಪ್ರಜ್ಞರ ಸಭೆಯು ಸರ್ವಮುದದಾಯಕ

ವಿಷಯ ಮಂಡನೆಯಲ್ಲಿ ಅಡೆತಡೆಗಳಿಲ್ಲ

ಸ್ತು ವಿಷಯಗಳಲ್ಲಿ ಸಂದೇಹಕೆಡೆಯಿಲ್ಲ

ಪೂರ್ವ ಪಕ್ಷಣೆಕೆ ಕೊಡುವ ಉತ್ತರವು ಖಚಿತ

ಶಾಸ್ತ್ರ ಪ್ರಮೇಯಗಳ ನೇತಾರರೂ ಕೂಡ

ಪ್ರವಚನವ ಕೇಳಿದರು ಅರಿವ ಬಯಕೆಯಲಿ
 
॥ ೪೮ ॥
 
ಶ್ರೀ ಪೂರ್ಣ ಪ್ರಜ್ಞರ ಶಾಸ್ತ್ರ ಪಾಂಡಿತ್ಯ

 
ಹೀಗೊಮ್ಮೆ ಗುರುಗಳ ದಿವ್ಯ ಸಮ್ಮುಖದಲ್ಲಿ

ಐದಾರು ಶಿಷ್ಯರು ಐದಾರು ರೀತಿಯಲ್ಲಿ
ಲಿ
ಭಾಗವತ ಪಾಠವನ್ನು ಒಪ್ಪಿಸುತ್ತಿದ್ದರು

ಲಿಖಿತ ಪಾಠದ ಪ್ರತಿಯ ಒಂದನ್ನು ತೋರಿ

ಪೂರ್ಣ ಪ್ರಜ್ಞರು ನಿಂತು ಖಚಿತದಲ್ಲಿ ನುಡಿದರು

"ಇದು ಮಾತ್ರ ಭಾಗವತದ ಮೂಲ ಪಾಠ'
 
" ॥ ೪೯ ॥
 
"ಇತರ ಪಾಠಗಳಲ್ಲಿ ತಪ್ಪು ಸ್ವಲ್ಪವೂ ಇಲ್ಲ

ಇಂತಿರಲು ಹೇಗೆ ಸರಿ, ನಿಮ್ಮ ಈ ನಿರ್ಣಯ ?"

ಗುರುಗಳೆಸೆದರು ಪ್ರಶ್ನೆ ಪೂರ್ಣ ಪ್ರಜ್ಞರ ಕಡೆಗೆ

ಧೃತಿಗೆಡದೆ ನುಡಿದರು ಪೂರ್ಣಪ್ರಜ್ಞರು ಆಗ
 

"ನಾನು ಹೇಳಿದ ಪಾಠ ಸರಿಯಾದ ಪಾಠ
 

ವೇದವ್ಯಾಸರ ರಚಿತ ಮೂಲ ಪಾಠ'
 
" ॥ ೫೦ ॥
 
ಇದ ಕೇಳಿ ಗುರುಗಳಿಗೆ ಆಶ್ಚರ್ಯವಾಯ್ತು

"ಭಾಗವತ ಮೂಲವನು ಬಲ್ಲೆನೆಂಬಿರಿ ನೀವು

ಪಂಚಮ ಸ್ಕಂಧದ ಮೂಲಪಾವ ಹೇಳಿ "

ಎಂದ ಗುರುಗಳ ಮಾತ ಕೇಳಿದಾಕ್ಷಣದಲ್ಲಿ

ವ್ಯಾಸವಿರಚಿತ ಮೂಲ ಪಂಚಮ ಸ್ಕಂಧವನು

ಪಟಪಟನೆ ನುಡಿದರು ಆ ಪೂರ್ಣಪ್ರಜ್ಞ
 
ನಾಲ್ಕನೆಯ ಸರ್ಗ/ 69
 
48
 
49
 
50
 
51
 
ರು ॥ ೫೧ ॥