This page has been fully proofread once and needs a second look.

ಇಷ್ಟಸಿದ್ಧಿಯು ಅನಿಷ್ಟ ಸಿದ್ಧಿಯಾಯಿತು

 
ಚತುರನಾಗಲಿ ಶಿಷ್ಯ ಮತ್ತಷ್ಟು ಎಂದು

ಬಯಸಿದರು ಪರಮಗುರು ಅಚ್ಯುತ ಪ್ರೇಕ್ಷರು

"ಇಪ್ಪಷ್ಟಸಿದ್ಧಿ" ಎಂಬ ಛಲ ಜಾತಿ ವಾರಿಧಿಯ

ಪಠಣ ಬೋಧನವನ್ನು ಪ್ರಾರಂಭಿಸಿದರು

ಗುರುವ ಬೋಧನೆಯನ್ನು ಆಲಿಸಿದರಾದರೂ

ಮಹಿಮರಿಗೆ ಅದರಲ್ಲಿ ಸ್ವಲ್ಪವೂ ರುಚಿ ಇಲ್ಲ
 
॥ ೪೪ ॥
 
"ಆದ್ಯಪದ್ಯಗಳಲ್ಲೇ ದೋಷಗಳು ಇಹುದು

ಅವುಗಳಾ ಸಂಖ್ಯೆ ಎರಡು ಹದಿನಾರಹುದು''

ಎಂದು ಅರುಹಿದ ಶಿಷ್ಯ, ಬಿಂಕದಲ್ಲಿ ನಿಂತು

"ಪರಿಹಾರ ದೊರೆಯುವುದು ಅವರೆಕೆಲ್ಲ ಮುಂದೆ
"
ಗುರುವ ಮಾತನು ಕೇಳಿ, ಶಿಷ್ಯನುಡಿದನು ಮತ್ತೆ

"ಏನದಕೆ ಉತ್ತರ ? ಈಗಲೇ ಹೇಳಿಬಿಡಿ"
 
॥ ೪೫ ॥
 
ಕನಲಿದರು ಗುರುಗಳು, ಶಿಷ್ಯನಾ ನುಡಿ ಕೇಳಿ

ಮಾಯಾವಾದಧ್ವರ್ಯು ಅಚ್ಯುತ ಪ್ರೇಕ್ಷರು

ಮಾತ ಮುಂದರಿಸಿದರು ಶಿಷ್ಯನನ್ನು ಕುರಿತು

"ಪಾಠ ಹೇಳಲು ನಿಮಗೆ, ಸಾಧ್ಯವಾಗದು ನನಗೆ
 
"
ಮಾತ ಕೇಳಿದ ಮಂದಿ, ಕಳವಳವ ಹೊಂದಿ

ಸಂಶಯವತಳೆದರು ಅದೈದ್ವೈತದಲ್ಲಿ
 
॥ ೪೬ ॥
 
ಶ್ರೀ ಪೂರ್ಣ ಪ್ರಜ್ಞರ ಪಾಠ ಪ್ರವಚನ ವೈಖರಿ

 
ಪಾಮರ, ಪಂಡಿತ, ಯತಿವರ್ಗವೆಂದು

ಮುಮುಕ್ಷುಗಳಲುಂಟು ಹಲವಾರು ವರ್ಗಗಳು

ಪಾಮರಗೆ ಶ್ರವಣ, ವಿಬುಧರಿಗೆ ಪ್ರವಚನ

ಯತಿಗಳಿಗೆ ಮತ್ತಿಷ್ಟು ಅಧಿಕ ಸಾಧನೆ ಬೇಕು

ಜನವಿನಂತಿಗೆ ಮಣಿದು ಶ್ರೀ ಪೂರ್ಣಪ್ರಜ್ಞರು

ಮಿಥ್ಯವಾದದ ತತ್ವ ತಿಳಿಯ ಹೇಳಿದರು
 
68 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
44
 
45
 
46
 
47
 
॥ ೪೭ ॥