This page has been fully proofread once and needs a second look.

ಮಧ್ ಸರೋವರ ಪ್ರಸಂಗ
 

 
ಗಂಗೆಯಲ್ಲಿ ಸ್ನಾನಕ್ಕೆ ಹೋಗಬಯಸಿದ ಶಿಷ್ಯ
 

ಗುರುವ ಅನುಮತಿಗಾಗಿ ಅಡಿಗಡಿಗೆ ನಮಿಸಿದನು
 

ಚಿಂತಿಸುತ ಕುಳಿತರು ಅಚ್ಯುತ ಪ್ರೇಕ್ಷರು

ಬರಲಿರುವ ದಿನಗಳಲ್ಲಿ ಶಿಷ್ಯವಿರಹದ ಬೇಗೆ

ಭರಿಸುವುದು ಹೇಗೆಂದು ಪರಿತಪಿಸಿ ಕುಳಿತರು

ಹರಿಯ ಮೊರೆ ಹೊಕ್ಕರು ಇದರ ಪರಿಹಾರಕ್ಕೆ
 
॥ ೪೦ ॥
 
ಎಂದೆಂದೂ ಓಗೊಡುವ ಶ್ರೀ ಹರಿಯು ಮೊರೆಗೆ

ಆ ಕ್ಷಣವೆ ಒಬ್ಬನೊಳು ಆವಿಷ್ಟನಾಗಿ

ಆದೇಶವಿತ್ನಾ ಕರುಣಾಳು ಹರಿಯು

"ಇಲ್ಲಿನಾ ಕೊಳದಲ್ಲಿ ನಾಳಿನಾಚೆಯ ದಿನದಿ,

ದೇವನದಿ ಗಂಗೆಯು ಬರಲಿಹಳು ಇಲ್ಲಿ

ತೆರಳದಿರಿ ನೀವಿನ್ನು ಗಂಗೆಯ ಸ್ನಾನಕ್ಕೆ"
 
॥ ೪೧ ॥
 
ಭಗವದಾಣತಿಯಂತೆ ಬಂದಿಳಿದಳಾ ಗಂ
ಗೆ
ದೇವಸನ್ನಿಧಿಯಲ್ಲಿ ಪ್ರವಹಿಸುತ ನಿಂದಳು

ಪೂರ್ಣಬೋಧರ ಹಿರಿಯ ಮುಂದಾಳುತನದಲ್ಲಿ
 

ಪುಳಕಗೊಂಡರು ಮಂದಿ ಜಳಕವಾಡುತಲಲ್ಲಿ

ಅವರಲ್ಲಿ ನೆಲೆಸಿರುವ ಶ್ರೀ ಹರಿಯ ಕೃಪೆಗಾಗಿ

ಹರಿಯುವಳು ಹನ್ನೆರಡು ವರ್ಷಗಳಿಗೊಮ್ಮೆ
 
॥ ೪೨ ॥
 
ಶ್ರೀ ಪೂರ್ಣ ಪ್ರಜ್ಞ ವಿಜಯ
 

 
ಆಶ್ರಮವ ಸ್ವೀಕರಿಸಿ ನಾಲ್ವತ್ತು ದಿನವಾಯ್ತು

ಪೂರ್ಣಬೋಧರ ಕೀರ್ತಿ ಎಲ್ಲೆಡೆಯು ಹರಡಿತ್ತು

ಧಾವಿಸುತ ಬಂದರು ಪಂಡಿತೋತ್ತಮರೆಲ್ಲ

ತರ್ಕ ಮೀಮಾಂಸೆಗಳ ದಿಗ್ಗಜಗಳೆಲ್ಲ

ವಾಸುದೇವ ಎಂಬ ಖ್ಯಾತ ಪಂಡಿತ ಕೂಡ

ಸೋಲನನುಭವಿಸಿದನು ಶಾಸ್ತ್ರಾರ್ಥದಲ್ಲಿ
 
ನಾಲ್ಕನೆಯ ಸರ್ಗ/ 67
 
40
 
42
 
43
 
॥ ೪೩ ॥