This page has been fully proofread once and needs a second look.

ಯತಿವರರು ತೊಡಗಿದರು ಬೋಧಿಸಲು ಧರ್ಮವ
 

ಶಿಷ್ಯನಿಗೆ ಎಲ್ಲವೂ ಕರತಲಾಮಲಕ

ಚಕಿತಗೊಂಡರು ಗುರುವು ಆಶ್ಚರ್ಯದಿಂದ

ಪರಿಪೂರ್ಣ ಜ್ಞಾನದ ಶಿಷ್ಯನನ್ನು ಕಂಡು

ಕಲಿಸತೊಡಗಿದ ಗುರುವು ತಾವೇ ಕಲಿತರು ಅಂದು

ಮನದೊಳಗೆ ವಿಸ್ಮಯದಿ ಮನಸೋತರವರು
 
॥ ೩೬ ॥
 
ರೂಪ್ಯ ಪೀಠಾಲಯದ ಅಧಿ ದೈವ ಹರಿಗೆ

ನಮಿಸಿದರು ಭಕುತಿಯಲ್ಲಿ ಶ್ರೀ ಪೂರ್ಣಪ್ರಜ್ಞರು

ಆಗೊಂದು ಸೋಜಿಗವು ಜರುಗಿತಲ್ಲಿ

ನರನೊಬ್ಬನಲ್ಲಿ ಆವಿಪ್ಪಷ್ಟಗೊಂಡನು ಹರಿಯು

ಪೂರ್ಣ ಬೋಧರ ತೋಳ ತನ್ನ ತೋಳಿಂದ

ಹಿಡಿದೆತ್ತಿ ನಿಲಿಸಿದನು ಶ್ರೀ ಹರಿಯು ಆಗ
 
॥ ೩೭ ॥
 
ಅಚ್ಯುತ ಪ್ರೇಕ್ಷರ ಬಳಿಗೆ ಐತಂದು
 

ಶ್ರೀ ಪೂರ್ಣಪ್ರಜ್ಞರನು ಜೊತೆಯಲ್ಲಿ ಕರೆತಂದು

ನುಡಿದನಾ ಶ್ರೀ ಹರಿಯು ಆಗ ಇಂತೆಂದು :

"ತತ್ವಶಾಸ್ತ್ರಗಳನ್ನು ಅರಿಯುವ ಬಯಕೆಯಲಿ

ಸೇವಿಸಿದ ನನ್ನನ್ನು ಬಹಳ ಕಾಲದಲ್ಲಿ
ಲಿ
ಸ್ವೀಕರಿಸು ಮಹಿಮನನು, ಈ ಶಿಷ್ಯನನ್ನು "
 
4
 
॥ ೩೮ ॥
 
ಸ್ವೀಕರಿಸಿ ಆದರದಿ, ಶ್ರೀ ಹರಿಯ ಕರುಣೆಯನು

ಸ್ಮರಿಸಿದರು ಆತನನು ಪರಿಪರಿಯ ವಿಧದಲ್ಲಿ

ಮುದಗೊಂಡು, ಕೃತ ಕೃತ್ಯ ನಾದೆನೆಂದವರು

ವಿಷಯ ಸಂಗವನೆಲ್ಲ ಇಡಿಯಾಗಿ ತೊರೆದವರು

ಪೂರ್ಣ ಬೋಧರ ಸಂಗ ಬಹುವಾಗಿ ಬಯಸಿದರು

ವಿಷಯ ಪರಿತ್ಯಾಗಕ್ಕೆ ಸತ್ಸಂಗ ಭೂಷಣ
 
66 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
36
 
37
 
38
 
39
 
॥ ೩೯ ॥