This page has been fully proofread once and needs a second look.

ಜ್ಞಾನಿಗಳು ಜಪಿಸುವರು ಪ್ರಣವಮಂತ್ರವನ್ನು

ಮೂರು ಮಾತ್ರೆಗಳಿಂದ ಆರಂಭವಾಗುವ ಮಂತ್ರ

ಬಹುವಿಧದ ಮಾತ್ರೆಗಳ ಪರಿಯಲ್ಲಿ ಹರಡುವುದು

ಪ್ರಣವ ಮಂತ್ರದ ಜಪಕೆ ಬ್ರಹ್ಮನೇ ಅಧಿಕಾರಿ

ಭವಿಷ್ಯ ಬ್ರಹ್ಮ ಈ ವಾಸುದೇವ

ಪ್ರಣವ ಪರಿಠಿಸಲು ತಕ್ಕ ಸನ್ಯಾಸಿಯಾದ
 
॥ ೩೨ ॥
 
ವಾಯುದೇವರ ಹೆಸರು ಶ್ರೀ ಪೂರ್ಣಯೋಬೋ

ದ್ವಿಜವೃಂದ ವಂದಿತ ವೇದಗಳಲಿದು ಮಾನ್ಯ

ಸಕಲ ಶಾಸ್ತ್ರವ ಬಲ್ಲ ಅಚ್ಯುತ ಪ್ರೇಕ್ಷರು

ಶಿಷ್ಯನನು ಕರೆದರು ಈ ಹೆಸರಿನಿಂದ

ಸಕಲ ಸದ್ಗುಣಗಳಿಗೆ ನೆಲೆ ವಾಸುದೇವ

ಈ ಹೆಸರು ಆತನಿಗೆ ಅನ್ವರ್ಥವಾಯಿತು
 
॥ ೩೩ ॥
 
ಗಂಧವೇ ಮೊದಲಾದ ಅಂಗಲೇಪನವಿಲ್ಲ

ತಾಂಬೂಲ ಮೆಲ್ಲದೆಯೆ ತುಟಿಯೆಲ್ಲ ಕೆಂಪು

ಸೌಂದರ್ಯ ವರ್ಧನೆಯ ಯಾವ ಸಾಧನವಿಲ್ಲ

ಆದರೂ ಈ ಯತಿಯ ತೇಜಸ್ಸು ಅಪ್ರತಿಮ

ದಂಡಮಾತ್ರವ ಹಿಡಿದು ಮೂರು ಲೋಕವ ಗೆಲುವ
 

ಮರುಳಾದರು ಮಂದಿ, ಈ ಯತಿಯ ಕಂಡು
 
॥ ೩೪ ॥
 
ಶ್ರೀ ಪೂರ್ಣ ಪ್ರಜ್ಞರ ಅಜ್ಞ ವಿಡಂಬನೆ
 

 
ಭು
ಜಂಗ, ಭೂತೇಶ, ವಿಷಂಹಂಗಪಾದಿಗಳು

ಕಾಯುವರು ಸರದಿಯನು ಈತನಿಗೆ ನಮಿಸಲು
 

ಇಂಥ ಮಹಿಮರು ನಮ್ಮ ಶ್ರೀ ಪೂರ್ಣಬೋಧರು

ಅಚ್ಯುತಪ್ರೇಕ್ಷರೆರೇ ಮುಂತಾದ ಯತಿಗಳಿಗೆ
 

ಸಾಷ್ಟಾಂಗ ನಮಿಸಿದರು ಭಕ್ತಿಪೂರ್ವಕವಾಗಿ

ಎಂಥದೀ ಚೋದ್ಯ ! ಎಂಥ ವಿಡಂಬನೆ !
 
ನಾಲ್ಕನೆಯ ಸರ್ಗ/ 65
 
32
 
3.3
 
34
 
35
 
॥ ೩೫ ॥