This page has not been fully proofread.

ಜ್ಞಾನಿಗಳು ಜಪಿಸುವರು ಪ್ರಣವಮಂತ್ರವನ್ನು
ಮೂರು ಮಾತ್ರೆಗಳಿಂದ ಆರಂಭವಾಗುವ ಮಂತ್ರ
ಬಹುವಿಧದ ಮಾತ್ರೆಗಳ ಪರಿಯಲ್ಲಿ ಹರಡುವುದು
ಪ್ರಣವ ಮಂತ್ರದ ಜಪಕ ಬ್ರಹ್ಮನೇ ಅಧಿಕಾರಿ
ಭವಿಷ್ಯ ಬ್ರಹ್ಮ ಈ ವಾಸುದೇವ
ಪ್ರಣವ ಪರಿಸಲು ತಕ್ಕ ಸನ್ಯಾಸಿಯಾದ
 
ವಾಯುದೇವರ ಹೆಸರು ಶ್ರೀ ಪೂರ್ಣಯೋಧ
ದ್ವಿಜವೃಂದ ವಂದಿತ ವೇದಗಳಲಿದು ಮಾನ್ಯ
ಸಕಲ ಶಾಸ್ತ್ರವ ಬಲ್ಲ ಅಚ್ಯುತ ಪ್ರೇಕ್ಷರು
ಶಿಷ್ಯನನು ಕರೆದರು ಈ ಹೆಸರಿನಿಂದ
ಸಕಲ ಸದ್ಗುಣಗಳಿಗೆ ನೆಲೆ ವಾಸುದೇವ
ಈ ಹೆಸರು ಆತನಿಗೆ ಅನ್ವರ್ಥವಾಯಿತು
 
ಗಂಧವೇ ಮೊದಲಾದ ಅಂಗಲೇಪನವಿಲ್ಲ
ತಾಂಬೂಲ ಮೆಲ್ಲದೆಯೆ ತುಟಿಯೆಲ್ಲ ಕೆಂಪು
ಸೌಂದರ್ಯ ವರ್ಧನೆಯ ಯಾವ ಸಾಧನವಿಲ್ಲ
ಆದರೂ ಈ ಯತಿಯ ತೇಜಸ್ಸು ಅಪ್ರತಿಮ
ದಂಡಮಾತ್ರವ ಓಡಿದು ಮೂರು ಲೋಕವ ಗೆಲುವ
 
ಮರುಳಾದರು ಮಂದಿ, ಈ ಯತಿಯ ಕಂಡು
 
ಶ್ರೀ ಪೂರ್ಣ ಪ್ರಜ್ಞರ ಅಜ್ಞ ವಿಡಂಬನೆ
 
ಭಜಂಗ, ಭೂತೇಶ, ವಿಷಂಗಪಾದಿಗಳು
ಕಾಯುವರು ಸರದಿಯನು ಈತನಿಗೆ ನಮಿಸಲು
 
ಇಂಥ ಮಹಿಮರು ನಮ್ಮ ಶ್ರೀ ಪೂರ್ಣಬೋಧರು
ಅಚ್ಯುತಪ್ರೇಕ್ಷರೆ ಮುಂತಾದ ಯತಿಗಳಿಗೆ
 
ಸಾಷ್ಟಾಂಗ ನಮಿಸಿದರು ಭಕ್ತಿಪೂರ್ವಕವಾಗಿ
ಎಂಥದೀ ಚೋದ್ಯ ! ಎಂಥ ವಿಡಂಬನೆ !
 
ನಾಲ್ಕನೆಯ ಸರ್ಗ/ 65
 
32
 
3.3
 
34
 
35