This page has been fully proofread once and needs a second look.

"ಮರುರಳಿ ನನ್ನನು ನೀವು ನೋಡಬಯಸುವಿರಾ ?
 

ಅಂತಾದರಿಂದೆನಗೆ ಅನುಮತಿಯ ನೀಡಿರಿ
 

ಸನ್ಯಾಸ ಸ್ವೀಕರಿಸಿ ಸಾರ್ಥಕ್ಯ ಪಡೆಯುವೆನು

ಇಲ್ಲವಾದರೆ ನಿಮಗೆ ನಾನು ಕಾಣುವುದಿಲ್ಲ

ಎಂದೆಂದೂ ಬರದಂತೆ ಎಲ್ಲಿಗೆಗೋ ತೆರಳುವೆನು

ದೇಶ ಕೋಶವ ಬಿಟ್ಟು ದೂರ ಹೋಗುವೆನು"
 
॥ ೨೮
 
ಈ ಪರಿಯ ಮಾತನ್ನು ಸುತನು ನುಡಿದುದ ಕೇಳಿ

ತಾಯಿ ಪರಿತಪಿಸಿದಳು ಪರಿಪರಿಯ ವಿಧದಲ್ಲಿ

"ಎಂದೆಂದೂ ಕಾಣದಿಹ ಮಗನಿದ್ದರೇನು ? ಇಲದಿದ್ದರೇನು ?
 

ಈ ಬಗೆಯ ಬಾಳನ್ನು ತಾಳಲಾರೆನು ನಾನು"

ಇಂತೆಂದು ಚಿಂತಿಸಿದ ಆ ಪರಮ ಸಾಧ್
ವಿ
ಸುತನ ಈ ಸದ್ಯಕೆ ಈಡೇರಲೆಂದಳು
 
॥ ೨೯ ॥
 
ಸನ್ಯಾಸ ಸ್ವೀಕಾರ
 

 
ಲೋಕಕೆಲ್ಲಕೂ ಗುರುವು, ಉತ್ತಮೋತ್ತಮ ದೇವ

ರುದ್ರಾದಿ ದೇವಗಣಕೆಲ್ಲ ಸಂಪೂಜ್ಯ

ಇಂಥ ದೇವರ ದೇವ ಶ್ರೀ ವಾಸುದೇವ

ತೆರಳಿದನು ಪರಮಗುರು ಅಚ್ಯುತ ಪ್ರೇಕ್ಷರ ಬಳಿಗೆ

ಎಲ್ಲ ಆಶ್ರಮಧರ್ಮ ಪಾಲಿಸುವವನೀತ

ಅಂಥ ಸುರವರ ಪಡೆದ ಯತಿಧರ್ಮದಾಶ್ರಯವ
 
॥ ೩೦ ॥
 
ಕಾಲಕಾಲಕ್ಕೆ ತಕ್ಕ ಎಲ್ಲ ಧರ್ಮಗಳನ್ನೂ

ವಾಸುದೇವನು ಬಲ್ಲ ನಿರ್ದಿಷ್ಟವಾಗಿ

ಶಾಸ್ತ್ರೋಕ್ತ ವಿಧಿಗಳಿಗೆ ಅನುಸಾರವಾಗಿ

ಕರ್ಮಗಳ ಮಾಡುವನು ಶ್ರದ್ಧೆ ನಿಷ್ಠೆಗಳಿಂದ

ತನಗೆ ಒಲಿದಿರುವ ಶ್ರೀ ಹರಿಯ ಕೃಪೆಗಾಗಿ

ತನ್ನೆಲ್ಲ ಸರ್ವಸ್ವ ಆತಗರ್ಪಿಸಿದ
 
64 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
28
 
29
 
30
 
31
 
॥ ೩೧ ॥