This page has been fully proofread once and needs a second look.

"ಪರಿಪರಿಯ ಶಾಸ್ತ್ರಗಳ ಬಲ್ಲವನು ನಾನು

ಅದರಿಂದ ಸಹಿಸಿಹೆನು ನಿನ್ನ ವಿರನು ನಿನ್ನ ವಿರಹದ ನೋವ

ಸಹಿಸಲಾರಳು ಅದನು , ನಿನ್ನ ಹಡೆದವ್ವ"
 

ತಂದೆಯಾ ನುಡಿ ಕೇಳಿ ವಾಸುದೇವನು ಅಂದ
 

"ಆ ಮಾತು ಹಾಗಿರಲಿ, ನೀವಾದರೂ ನೀಡಿ ಅಪ್ಪಣೆಯನು"
 

ಎಂದೆನುತ ತಂದೆಯ ಚರಣಕೆರಗಿದನು
 
॥ ೨೪ ॥
 
ಪರಮಜ್ಞಾನಿಗಳಾದ ಮಧ್ಯಗೇಹರು ಕೂಡ

ಸೋಲನನುಭವಿಸಿದರು ವಾಗ್ಯುದ್ದಲ್ಲಿ

''ಹಡೆದವ್ವ ಒಪ್ಪಿದರೆ, ಇರದೆನ್ನ ಆಕ್ಷೇಪ'
"
ಎಂದು ನುಡಿಯುತ ಆ ಭೂಸುರೋತ್ತಮರು

ಮರಳಿದರು ಮತ್ತೊಮ್ಮೆ ಮನೆಯ ಕಡೆಗೆ

ಅರುಹಿದರು ನಿಸತಿಗೆ ವಿಷದ ವಿಷಯವನು
 
॥ ೨೫ ॥
 
ಭಾವೀ ವಿಷ್ಣುತೀರ್ಥರ ಅಮಾರ
 
ವತಾರ
 
ಶ್ರೀ ರಾಮಚಂದ್ರನಿಗೆ ಲಕ್ಷ್ಮಣನ ಪರಿಯಲ್ಲಿ

ಶ್ರೀ ಭೀಮಸೇನನಿಗೆ ಇಂದ್ರನಂದನನಂತೆ

ಕೃಷ್ಣ ಪರಮಾತ್ಮನಿಗೆ ಅನುಜ ಗದನಂ
ತೆ
ವಾಸುದೇವಗೆ ತಮ್ಮ ಹುಟ್ಟಿಯೇ ಬಿಟ್ಟ

ಈ ಸೋದರನು ಅತ್ಯಂತ ಅಭಿಮಾನಶಾಲಿ

ಅಣ್ಣನಲಿ ವಿಶ್ವಾಸ, ಭಯಭಕ್ತಿ, ಆದರ
 
॥ ೨೬ ॥
 
ಮಗನ ಸನ್ಯಾಸಕ್ಕೆ ಮಾತೆಯ ಮೌನ ಸಮ್ಮತಿ
 

 
ಪ್ರಲಯ ಕಾಲಾಂತ್ಯದಲೂ ನಾಶವಾಗದ ಜ್ಞಾನ !

ಇಂಥ ಜ್ಞಾನವ ಪಡೆದ ಆ ವಾಸುದೇವ,

ತನ್ನ ಮನೆಗೈತಂದು ಇಂತು ನುಡಿದ
 
:
"ಈ ಬಾಲಕನೆ ನಿಮ್ಮಯ ಪಾಲಕನು ಮುಂದೆ'
"
ಪತಿಯ ಆಣತಿಯಂತೆ ಸುತಗೆ ಸನ್ಯಾಸವನ್ನು
ನು
ಧಿಕ್ಕರಿಸಿ ನುಡಿದಿದ್ದ ಮಾತೆಗಿಂತೆಂದನು :
 
ನಾಲ್ಕನೆಯ ಸರ್ಗ/ 63
 
24
 
25
 
26
 
27
 
॥ ೨೭ ॥