This page has been fully proofread once and needs a second look.

ಹಿರಿಯರ ಮಾತನ್ನು ಮೀರಲಂಜುವರವರು

ಮಗನ ನಿರ್ಧಾರವದು ಅಚಲ ಎಂದರಿತವರು
ವೆಂದರಿತವರು
ಕುಪಿತರಾದರು ಮಗನ ಮನದ ನಿಶ್ಚಯ ಕಂಡು

ನಿಜಸುತನು ಕೌಪೀನ, ದಂಡಕವ ಧರಿಸಿದರೆ

ಪ್ರತಿಶ್ರವದ ಸಾಹಸವ ಮಾಡುವೆನು ಎಂದು

ದೃಢವಾದ ನುಡಿಯಿಂದವರು ಘೋಷಿಸಿದರು
 
॥ ೨೦ ॥
 
ಹೊದೆದ ವಸ್ತ್ರವ ಹರಿದು, ಕೌಪೀನ ಧರಿಸಿ

ವಾಸುದೇವನು ನುಡಿದ ಕಿಂಚಿತ್ತು ಅಳುಕದೆ

"ಕೌಪೀನ ಧರಿಸಿರುವೆ, ಸಾಹಸವ ತೋರಿರಿ!

ಸನ್ಯಾಸ ಸ್ವೀಕಾರ ಹರಿಗೆ ಪ್ರಿಯವಹುದು

ಅಡ್ಡಿಯನ್ನೊಡ್ಡುವುದು ನಿಮಗೆ ತರವಲ್ಲ"
 

ವಾಸುದೇವನ ನುಡಿಯು ತುಂಬ ಖಂಡಿತವಾಯ್ತು
 
॥ ೨೧ ॥
 
ಮಗನ ಮಾತನು ಕೇಳಿ ತಂದ ಮರುನುಡಿದ
 
ದೆ ಮರುನುಡಿದ
"ಹಡೆದವರ ಪಾಲನೆಯು ಮಿಗಿಲಾದ ಸತ್ಕಾರ್ಯ
 

ಇಂತು ಪೇಳ್ವರು ಜಗದ ಎಲ್ಲ ಸಜ್ಜನರು

ನಿನಗಿಂತಲೂ ಹಿರಿಯ ಇನ್ನೆರಡು ಮಕ್ಕಳು

ಅಗಲಿಹರು ನಮ್ಮನ್ನು ಈಗಾಗಲೇ

ನೀನು ತೊರೆದರೆ ನಮಗೆ ಇನ್ನಾರು ದಿಕ್ಕು ?"
 
20
 
62 / ಶ್ರೀ ಸುಮಧ್ಯ ವಿಜಯ ಕನ್ನಡ ಕಾವ್ಯ
 
21
 
22
 
॥ ೨೨ ॥
 
"ನಮಗೆಂದು ಮೂಡುವುದೂದೊ ಜೀವನ ವಿರಕ್ತಿ

ಅಂದೊದಗಬೇಕೆಮಗೆ ಸನ್ಯಾಸ ಶಕ್ತಿ

ವಿಷಯ ಸಂಗವನೆಲ್ಲ ತೊರೆದು ನಿಂದಿಹೆ ನಾನು

ನೀವು ಆಡಿದ ಮಾತು ಅಡ್ಡಿಯಾಗದು ಅದಕ್ಕೆ

ಮತ್ತೊಂದು ಮಾತನ್ನು ಖಚಿತಪಡಿಸುವೆ, ಕೇಳಿ
 

ಇನ್ನೊಬ್ಬ ಪಾಲಕನು ಜನಿಸಿದರೆ ಮಾತ್ರ, ಸನ್ಯಾಸಿಯಾಗುವೆನು ನಾನು ಮುಂದೆ 23
 
॥ ೨೭ ॥