This page has been fully proofread once and needs a second look.

ಮಾರು ಹೋದರು ಅವರು ಮಾಯಾವಾದಕ್ಕೆ

ಮರಳಿ ಪರಿತಪಿಸಿದರು ದುಷ್ಟಶಾಸ್ತ್ರ ಕುತರ್ಕ
ಕೆ
ಪಾಪಗಳದೆಲ್ಲದರೂಕೂ ಪರಿತಾಪ ಪರಿಹಾರ

ಹಿಂದೊಮ್ಮೆ ಶ್ರೀ ಕೃಷ್ಣ ಚರಣಾರವಿಂದವನು

ಗಾಸಿಗೊಳಿಸಿದ ವ್ಯಾಧ ಬಾಣವೊಂದನ್ನು ಬಿಟ್ಟು

ನಂತರದ ಪರಿತಾಪ ಪಾಪ ಪರಿಹರಿಸಿತ್ತು
 
॥ ೮ ॥
 
·
 
ಉಪನಿಷತ್ತುಗಳೆಲ್ಲ ಕರತಲಾಮಲಕ

ವಿನಯವೆಂಬುದು ಅವರ ರತ್ನದಾಭರಣ

ಹಗಲಿರುಳು ಎನ್ನದೆ ತತ್ವಚಿಂತನೆ ಚಿಂ
ತೆ
ಇಂತು ಮೆರೆಯುತಲಿದ್ದ ಅಚ್ಯುತ ಪ್ರೇಕ್ಷರನ್ನು
ನು
ಮರಣ ಶಯ್ಕೆಯೆಯಲಿದ್ದ ಅವರ ಗುರುಗಳು ಒಮ್ಮೆ
 

ಏಕಾಂತದಲ್ಲಿ ಕರೆದು ಇಂತಂತೆಂದು ಹೇಳಿದರು
 
॥ ೯ ॥
 
''ನಾನೆ ಪರಬೊಮ್ಮ, ನನ್ನಿಂದ ಯಾವುದೂ ಬೇರೆ ಅಲ್ಲ'
"
ಎಂಬಂಥ ಮಾತೆಲ್ಲ ಅರ್ಥ ಶೂನ್ಯ
 

ಅಂಥ ಮಾತನು ನಂಬಿ ಮರುಳಾಗಬೇಡ

ಮಾಯಾವಾದದ ಸೂತ್ರ, ಧರ್ಮ ಬಾಹಿರ ಸೂತ್ರ

ಶಾಸ್ತ್ರೋಕ್ತ ಸಮ್ಮತಿ ಅದಕೆಂದೂ ಇಲ್ಲ

ಸುವ್ರತನೆ, ನೀನದನು ತ್ಯಜಿಸಿ ಹೊರಹಾಕು"
 
॥ ೧೦ ॥
 
"ಆತ್ಮೈಕ್ಯ" ವೆಂಬುದದು ಮಾಯಾವಾದದ ವಿಧಿಯು
 

ಹರಿಯ ಆರಾಧನೆಗೆ ಸರಿಯಾದ ವಿಧಿಯಹುದೆ ?

ಮಿಥ್ಯವಾದದ ತರ್ಕ, ತಥ್ಯವಿಲ್ಲದ ತರ್ಕ
 

ಎನಗಿರಲಿ, ಎನಗಿಂತ ಹಿರಿಯರಾದವರಿಗೂ
 

ಗುರುವ ಗುರುವಿನ ಗುರುವಿಗೂ ತಿಳಿಯಲಾರದ ತರ್ಕ
 

ನಂಬದಿರು ಇದನು, ಮುದದಿಂದ ಭಜಿಸು ಶ್ರೀ ಮುಕುಂದನನು
 
ನಾಲ್ಕನೆಯ ಸರ್ಗ/ 59
 
8
 
10
 
11
 
" ॥ ೧೧ ॥