This page has been fully proofread once and needs a second look.

ಶಬ್ದಗಳನುಚ್ಚರಿಪ ವಾಸುದೇವನ ಪರಿಯು

ಸಕಲ ಲಕ್ಷಣಗಳ ಶಿಕ್ಷಣಕ್ಕೆ ಅದುವೆ ಮೂಲ

ಸ್ಲನಾದಿ ದೋಷಗಳಿಂ ದೂರವಾಗಿಹುದು

ವೇದಗಳ ಪರಿಸುವ ವಾಸುದೇವನ ಶೈಲಿ

ಗುರುಗಳಿಗೆ ಅತ್ಯಂತ ಅಚ್ಚರಿಯ ನೀಡಿತು

ಇದ ಕಂಡು ದೇವಗಣ ಮುದಗೊಂಡಿತು
 
॥ ೫೨ ॥
 
ಲೋಕಗುರುವಿನಿಂದ ಗುರುಪುತ್ರನ ಉದ್ಧಾರ
 

 
ಒಮ್ಮೆ ಕಾನನದಲ್ಲಿ ಗುರುಪುತ್ರನೊಡನೆ
 

ವಾಸುದೇವನು ಹೊರಟ ಸಂಚರಿಸಲೆಂದು
 

ಗುರುಪುತ್ರ, ಪ್ರಿಯಮಿತ್ರ, ಈಶ್ರ್ವರಿಗೂ ಬಲುನಂಟು

ಮಿತ್ರ ಬಳಲಿದನಲ್ಲಿ ತಲೆ ಶೂಲೆಯಿಂದ

ವಾಸುದೇವನು ಆಗ ಗೆಳೆಯನಾ ಕಿವಿಯಲ್ಲಿ

ಗಾಳಿಯನು ಉಸುರಿದನು, ಬಾಧೆ ಪರಿಹರಿಸಿದನು
 
॥ ೫೩ ॥
 
ಗುರುವಿಗೆ ಜ್ಞಾನದಕ್ಷಿಣೆ - ಗುರುಕುಲವಾಸ ಸಮಾಪ್ತಿ
 

 
ವಾಸುದೇವನ ಪ್ರತಿಭೆ ದಿವ್ಯ ಪ್ರತಿಭೆಯದಾಯ್ತು

ಶ್ರವಣ ಮಾತ್ರದಿ ಕಲಿವ, ಉಪನಿಷತ್ತುಗಳನ್ನು

ಒಮ್ಮೆಯೂ ಕೇಳಿರದ ನೂರಾರು ಕೃಶ್ರುತಿಗಳನು

ಸುಲಭದಲಿ ಗ್ರಹಿಸುವಾ ದಿವ್ಯ ಪ್ರತಿಭೆ

ಇದರಲ್ಲಿ ಅಚ್ಚರಿಯು ಇಲ್ಲವೇ ಇಲ್ಲ

ಹೇಗೆಂದು ಬಣ್ಣಿಪುದು ಇಂಥ ಮಹಿಮನ ಮಹಿಮೆ ?
 
॥ ೫೪ ॥
 
ಶಿಷ್ಯನಿಂದ ಗುರುವಿಗೆ ಜ್ಞಾನದಾನ
 

 
ವಾಸುದೇವನು ಒಮ್ಮೆ ಏಕಾಂತದಲ್ಲಿ

ಪಾಠವನು ಒಪ್ಪಿಸಿದ ಗುರುವ ಸಮ್ಮುಖದಲ್ಲಿ

ಐತರೇಯೋಪನಿಷತ್ತು ಬಲು ಗೂಢವಾದುದು

ಅದರಂತರಾರ್ಥವನು ಗುರುಗಳಿಗೆಗೇ ತಿಳಿಸಿದನು
 

ಮೋಕ್ಷಬೀಜವದಾಯ್ತು ಗೋವಿಂದ ಭಕ್ತಿ

ಗುರುವಿಗಿತ್ತನು ಯೋಗ್ಯ ಗುರುದಕ್ಷಿಣೆ
 
52 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
52
 
53
 
54
 
55
 
॥ ೫೫ ॥