This page has not been fully proofread.

ಶಬ್ದಗಳನುಚ್ಚರಿಪ ವಾಸುದೇವನ ಪರಿಯು
ಸಕಲ ಲಕ್ಷಣಗಳ ಶಿಕ್ಷಣಕ್ಕೆ ಅದುವೆ ಮೂಲ
ಸ್ವಲನಾದಿ ದೋಷಗಳಿಂ ದೂರವಾಗಿಹುದು
ವೇದಗಳ ಪರಿಸುವ ವಾಸುದೇವನ ಶೈಲಿ
ಗುರುಗಳಿಗೆ ಅತ್ಯಂತ ಅಚ್ಚರಿಯ ನೀಡಿತು
ಇದ ಕಂಡು ದೇವಗಣ ಮುದಗೊಂಡಿತು
 
ಲೋಕಗುರುವಿನಿಂದ ಗುರುಪುತ್ರನ ಉದ್ಧಾರ
 
ಒಮ್ಮೆ ಕಾನನದಲ್ಲಿ ಗುರುಪುತ್ರನೊಡನೆ
 
ವಾಸುದೇವನು ಹೊರಟ ಸಂಚರಿಸಲೆಂದು
 
ಗುರುಪುತ್ರ, ಪ್ರಿಯಮಿತ್ರ, ಈಶ್ವರಿಗೂ ಬಲುನಂಟು
ಮಿತ್ರ ಬಳಲಿದನಲ್ಲಿ ತಲೆ ಶೂಲೆಯಿಂದ
ವಾಸುದೇವನು ಆಗ ಗೆಳೆಯನಾ ಕಿವಿಯಲ್ಲಿ
ಗಾಳಿಯನು ಉಸುರಿದನು, ಬಾಧೆ ಪರಿಹರಿಸಿದನು
 
ಗುರುವಿಗೆ ಜ್ಞಾನದಕ್ಷಿಣೆ - ಗುರುಕುಲವಾಸ ಸಮಾಪ್ತಿ
 
ವಾಸುದೇವನ ಪ್ರತಿಭೆ ದಿವ್ಯ ಪ್ರತಿಭೆಯದಾಯ್ತು
ಶ್ರವಣ ಮಾತ್ರದಿ ಕಲಿವ, ಉಪನಿಷತ್ತುಗಳನ್ನು
ಒಮ್ಮೆಯೂ ಕೇಳಿರದ ನೂರಾರು ಕೃತಿಗಳನು
ಸುಲಭದಲಿ ಗ್ರಹಿಸುವಾ ದಿವ್ಯ ಪ್ರತಿಭೆ
ಇದರಲ್ಲಿ ಅಚ್ಚರಿಯು ಇಲ್ಲವೇ ಇಲ್ಲ
ಹೇಗೆಂದು ಬಣ್ಣಿಪುದು ಇಂಥ ಮಹಿಮನ ಮಹಿಮೆ ?
 
ಶಿಷ್ಯನಿಂದ ಗುರುವಿಗೆ ಜ್ಞಾನದಾನ
 
ವಾಸುದೇವನು ಒಮ್ಮೆ ಏಕಾಂತದಲ್ಲಿ
ಪಾಠವನು ಒಪ್ಪಿಸಿದ ಗುರುವ ಸಮ್ಮುಖದಲ್ಲಿ
ಐತರೇಯೋಪನಿಷತ್ತು ಬಲು ಗೂಢವಾದುದು
ಅದರಂತರಾರ್ಥವನು ಗುರುಗಳಿಗೆ ತಿಳಿಸಿದನು
 
ಮೋಕ್ಷಬೀಜವದಾಯ್ತು ಗೋವಿಂದ ಭಕ್ತಿ
ಗುರುವಿಗಿತ್ತನು ಯೋಗ್ಯ ಗುರುದಕ್ಷಿಣೆ
 
52 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
52
 
53
 
54
 
55