This page has been fully proofread once and needs a second look.

ಉಳಿದವರ ಹಿಡಿತದಲ್ಲಿ ಉಳಿಯದೆ ಓಡುವುದು

ಬಾಹುಗಳಲವರನ್ನು ಬಲವಾಗಿ ಹಿಡಿಯುವುದು

ಭಾರಗಳನೆತ್ತುವುದು ಹೂವ ಮಾಲೆಯ ತೆರದಿ

ಇಂಥ ಸಾಹಸವೆಲ್ಲ ಅತಿ ಸುಲಭ ಆತನಿಗೆ

ಆ ವಾಸುದೇವನ ಕಂಡು ಊರ ಜನರೆಲ್ಲ

"ಭೀಮಸೇನನೆ ಇವನು ಬೇರಲ್ಲ' ಎಂದರು
 
॥ ೪೮ ॥
 
ಜಗಕೆಲ್ಲ ಗುರುವಾದ ವಾಸುದೇವನು ಹೀಗೆ*

ತನ್ನ ಕಾಲವನೆಲ್ಲ ಆಟದಲಿ ಕಳೆಯುತ್ತ

ಪಾಠ ಪ್ರವಚನದತ್ತ ನಿಶ್ಚಿಂತೆ ತೋರುತ್ತ

ತನ್ನ ಮನೆಯಲ್ಲಿಯೇ ಕಾಲ ಕಳೆಯುತಲಿರಲು

ಪೂಗವನ ವಂಶಸ್ಥ ವಾಸುದೇವನ ಗುರುವು

ಆತನಾ ನಡೆ ಕಂಡು ಮನನೊಂದರು
 
॥ ೪೯ ॥
 
ಇಂತಿರಲು, ಒಮ್ಮೆ , ವಾಸುದೇವನ ಗುರುವು
 

ಕುಪಿತರಾದರು ಅವನ ಚರ್ಯೆಯ ಕಂಡು
 

"ಅಧ್ಯಯನದಿ ಏಕಿಷ್ಟು ಅಶ್ರದ್ದೆಧೆ ನಿನಗೆ ?

ಸ್ನೇಹಿತರ ಒಡಗೂಡಿ ಪಠಿಸಲಾರೆಯ ನೀನು ?

ಏಕಿಷ್ಟು ಆಲಸ್ಯ ? ಈ ಉದಾಸೀನತೆ ?
 
"
ಇಂತೆಂದು ಕನಲಿದರು ಆ ಪರಮ ಗುರುಗಳು
 
॥ ೫೦ ॥
 
"ಅರ್ಧ ಋಕ್, ಪಾದಗಳು, ಇತ್ಯಾದಿಯಾಗಿ

ಚರಣ ಚರಣಗಳಲ್ಲಿ ಪಠನ ಮಾಡುವ ರೀತಿ

ಸ್ವೀಕರಿಸದಾಗಿದೆ ಎನ್ನ ಮನ ಗುರುವೆ
"
ಶಿಷ್ಯನಾ ನುಡಿ ಕೇಳಿ ಕುಪಿತನಾದನು ಗುರುವು

"ಮಾತನಾಡುವೆ ನೀನು ಪಂಡಿತೋತ್ತಮನಂ
ತೆ
ಈ ದಿನದ ಪಾಠದ ಉಳಿದ ಭಾಗವ ಹೇಳು"
 
ಮೂರನೆಯ ಸರ್ಗ / 51
 
48
 
49
 
50
 
51
 
॥ ೫೧ ॥