This page has not been fully proofread.

ಓಡುವರು ಗೆಳೆಯರು ಶರವೇಗದಿಂದ
 
ಗುರಿಯ ಮುಟ್ಟುವ ಬಗೆಗೆ ಎಲ್ಲರಿಗೂ ಕಾತುರ
ಲಗುಬಗೆಯ ಓಟದ ಈ ಸ್ಪರ್ಧೆಗಳಲ್ಲಿ
ವಾಸುದೇವನು ಮುಂದ, ಉಳಿದವರು ಹಿಂದೆ
ಸೋಜಿಗವು ಇದರಲ್ಲಿ ಇನಿತಾದರೂ ಇಲ್ಲ
ವಾಯುದೇವನ ವೇಗ ಮೀರ ಬಲ್ಲವರಾರು ?
 
ಕೆಲವೊಮ್ಮೆ ಮಿತ್ರರಲಿ ಮತ್ತೊಂದು ಆಟ
ಎಲ್ಲರಿಗೂ ಎತ್ತರಕೆ ಜಿಗಿಯುವವರಾರೆಂದು
ವಾಸುದೇವನ ಜಿಗಿತ ಎಲ್ಲರಿಗೂ ಮಿಗಿಲು
ರಾಮನಾಣತಿಯಂತೆ ಸೀತೆಯನ್ನು ಅರಸುತ್ತ
ಹೊರಟ ಹನುಮನ ಪರಿಯ ಅಂಥ ಜಿಗಿತ
ವಾಲಿಸುತ ಅಂಗದನ ಜಿಗಿತವನು ಮೀರಿಸಿತು.
 
ಜಲವಿಹಾರದ ಕ್ರೀಡೆ ಮತ್ತೊಂದು ಮೋಜಿನದು
ಈಜುಗಾರಿಕೆಯಲ್ಲೂ ವಾಸುದೇವನೇ ಮುಂದು
ಸಿಟ್ಟಾದ ಮಿತ್ರರು ಆಟದಲ್ಲಿ ಸೋತು
ತಣ್ಣೀರನೆರಚಿದರು ವಾಸುದೇವನ ಮುಖಕೆ
ಇದರಿಂದ ಕೆಂಪಾಯ್ತು ಬಾಲಕನ ಕಂಗಳು
ಮುಖದಲ್ಲಿ ಮೂಡಿತ್ತು ನಗೆಯ ಬೆಳದಿಂಗಳು
 
ತುಂಬು ತೋಳಲದವರು ಆ ಮಿತ್ರರೆಲ್ಲಾ
ಒಮ್ಮೊಮ್ಮೆ ಒಬ್ಬೊಬ್ಬ ವಾಸುದೇವನ ಬಳಿಗೆ
ಮತ್ತೊಮ್ಮೆ ಎಲ್ಲರೂ ಒಟ್ಟಾಗಿ ಕಲೆತು
ಹರಿಹಾಯ್ದು ಬರುವರು ಆತನೆಡೆಗೆ
ಸ್ವಲ್ಪವೂ ಧೃತಿಗೆಡದ ವಾಸುದೇವನು ಮಾತ್ರ
ಕೆಡುವುವನವರನ್ನು ನಕ್ಕು ನಸುನಗುತ
 
50 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
45
 
46
 
47