This page has been fully proofread once and needs a second look.

ಬ್ರಹ್ಮಚರ್ಯದ ಧರ್ಮ ನಿಷ್ಠೆಯಲ್ಲಿ ಪಾಲಿಸುತ

ಬ್ರಾಹ್ಮಣೋಚಿತ ಕರ್ಮ ಶ್ರದ್ಧೆಯಲ್ಲಿ ಮಾಡುತ್ತ

ಸುಬ್ರಹ್ಮಣ್ಯನ ತೆರದಿ ಕಂಗೊಳಿಸಿ ಮೆರೆದಿದ್ದ

ಸಂಧ್ಯಾದಿ ಕರ್ಮಗಳ ಎಂದೆಂದೂ ಬಿಡದಿದ್ದ

ಬಾಲವಟುವನು ಕಂಡ ನಡುಮನೆಯ ಭಟ್ಟ
 

ಮನದೊಳಗೆ ಸಂತಸದಿ ಮುದಗೊಂಡನು
 
॥ ೩೬ ॥
 
ಸಕಲ ಲೋಕಕೆ ಒಡೆಯ ಶ್ರೀ ವಾಯುದೇವ

ಜನದ ಐಸಿರಿಗೆಲ್ಲ ಈತನೆ ಭಾಜನನು

ಇಂಥ ವೈಭವವನ್ನು ಮರೆಮಾಚಿಸುತ್ತ

ನಿರ್ಗತಿಕನಂತೊಂದು ಕೌಪೀನ ಧರಿಸುತ್ತ

ಎಲ್ಲೆಡೆಯು ಸಂಚರಿಪ ಸೋಜಿಗವ ಕಂಡು

ಅಚ್ಚರಿಯು ಮೂಡಿತ್ತು ದೇವವೃಂದದಿ ಅಂದು
 
॥ ೩೭ ॥
 
ಕಾಲುಕಚ್ಚಿ ಕಾಲವಶನಾದ ಮಣಿಮಂತ
 

 
ಸರ್ಪರೂಪದ ಒಬ್ಬ ರಕ್ಕಸನು ಒಮ್ಮೆ

ದ್ವೇಷವೆಂಬುವ ದುಷ್ಟ ವಿಷದ ಜ್ವಾಲೆಗಳಿಂದ

ಸುತ್ತಮುತ್ತಲ ಜನರ ಅಂಜಿಸುತಲಿದ್ದ

ಮಣಿ ಮಂತನೆಂಬುವ ಈ ದುಷ್ಟ ರಾಕ್ಷಸನು

ಮನೆಯಿಂದ ಹೊರಬಿದ್ದು ಗಿರಿಯೆಡೆಗೆ ನಡೆದಿದ್ದ

ವಟು ವಾಸುದೇವನನು ಕಚ್ಚಿ ಕೊಲ್ಲಲು ಬಂದ
 
॥ ೩೮ ॥
 
ವಿಷದ ದವಡೆಗೆ ಸಿಲುಕಿ ಹಸುಳೆ ಸಾಯಲಿ ಎಂದು

ಜೀವರಿಗೆ ಪ್ರಭುವಾದ ವಾಸುದೇವನ ಕಡೆಗೆ

ಹೆಡೆಯೆತ್ತಿ ತ್ವರೆಯಿಂದ ಧಾವಿಸಿದ ಅಸುರ

ಪ್ರಾಣದೇವನಿಗಾರು ಗಾಸಿ ಮಾಡಲು ಸಾಧ್ಯ ?

ವಾಸುದೇವನು ತನ್ನ ಕೆಂಪು ಕಾಲ್ಪೆಬೆರಳಿಂದ

ರಕ್ಕಸನ ತುಳಿತುಳಿದು ಪುಡಿಮಾಡಿ ಬಳಲಿಸಿದ
 
48 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
36
 
37
 
38
 
39
 
॥ ೩೯ ॥