This page has been fully proofread once and needs a second look.

ಸಕಲಗ್ರಹ ಸಮ್ಮಿಳಿತ ಸುಮುಹೂರ್ತದಲ್ಲಿ

ಗುರುಬಲದ ಬೆಂಬಲದ ಶುಭಫಳಿಗೆಯಲ್ಲಿ

ಲೋಪದೋಷಗಳಿರದ ಮಂಗಳದ ಕ್ಷಣದಲ್ಲಿ

ಬಂಧುಮಿತ್ರರ, ದ್ವಿಜರ ಹಿರಿಯ ಸಮ್ಮುಖದಲ್ಲಿ

ಸಡಗರದಿ ನಡೆಯಿತು ಬ್ರಹ್ಮೋಪದೇಶ

ಭಾವೀ ಬ್ರಹ್ಮನಿಗೆ ಜ್ಞಾನೋಪದೇಶ !
 
॥ ೩೨ ॥
 
ಪರಿಪರಿಯ ವೇದಗಳ ಪರಿಪರಿಯ ರೂಪದಲ್ಲಿ
 
ಲಿ
ಸುರವರರ ಪ್ರಮದೆಯರು ಸಂಭ್ರಮೋತ್ಸಾಹದಲ್ಲಿ
ಲಿ
ವಾಸುದೇವನ ಹೊಳೆವ ಮುಖವೆಂಬ ಮಂಟಪದಿ
 

ವಿಹರಿಸಲು ಬಯಸಿದರು ಪತಿಯರೊಡಗೂಡಿ
 

ಆಕಾಶದಿಂದಲೇ ಅಭಿನಂದಿಸುತ್ತ
 

ನಲಿದು ಕುಣಿದಾಡಿದರು ಆನಂದದಿಂದ
 
॥ ೩೩ ॥
 
ಪರಿಶುದ್ಧ ಮನಸುಳ್ಳ ಮಧ್ಯಗೇಹರು ಆಗ

ಸಕಲ ಸಿದ್ಧತೆಯಿಂದ ಸನ್ನದ್ರಾಗಿ,

ಅಗ್ನಿಯನ್ನು ಪ್ರಜ್ವಲಿಸಿ ಹೋಮಾದಿಗಳ ಮಾಡಿ

ವೇದೋಕ್ತ ಮಂತ್ರಗಳ ವಿಧಿಗಳನುಸಾರ

ಉಪನಯನ ಮಾಡಿದರು ವರಪುತ್ರ ವಟುವಿಗೆ

ಶಿಖೆಯಿಂದ ಶೋಭಿಸುತ ಕಂಗೊಳಿಸುತ್ತಿದ್ದವಗೆ
 
॥ ೩೪ ॥
 
ವಾಸುದೇವಗೆ ತಂದ ಉಪದೇಶ ಮಾಡಿದನು
 

"ಅಗ್ನಿಯನ್ನು ಸೇವಿಸು; ಗುರುಗಣಕೆ ವಂದಿಸು

ವೇದಾದಿ ಸಚ್ಛಾಸ್ತ್ರ ಅಧ್ಯಯನ ಮಾಡು

ಆಚರಿಸು ವ್ರತಗಳನು, ಸದ್ವಿಪ್ರನಾಗು
"
ಭಾವೀ ಬ್ರಹ್ಮನಿಗೆ ಬ್ರಹೋಹ್ಮೋಪದೇಶವೆ ?

ಮೆಲುನಗೆಯ ಬೀರಿದರು ಸೂರ್ಯ ಚಂದ್ರಾದಿಗಳು
 
ಮೂರನೆಯ ಸರ್ಗ / 47
 
32
 
33
 
34
 
35
 
॥ ೩೫ ॥