This page has been fully proofread once and needs a second look.

ಲಿರುಕುಚ ಕುಲಗುರುವಿನಿಂದ ಲಿಶುಭ ಕಕುಚ ಶಬ್ದಾರ್ಥ

 
ನಡುಮನೆಯ ಭಟ್ಟರು ಖ್ಯಾತ ಪೌರಾಣಿಕರು

ಜನಜಾತ್ರೆ ಸೇರುವುದು ಅವರ ಪ್ರವಚನ
ಕೆ
ಒಮ್ಮೆ ಆ ಊರಿನಲ್ಲಿ ಪ್ರವಚನದ ಕಾಲದಲಿ

ಜನರ ಮನ ಗೆಲಿದಿದ್ದ ವಾಸುದೇವನು ನಿಂದು

ವಾಚನವ ಮಾಡಿದ್ದ ಭಾಗವನೆ ಮತ್ತೊಮ್ಮೆ

ವಾಚನವ ಮಾಡಿರೆಂದರುಹಿದನು ತಂದೆಗೆ
 
॥ ೨೮ ॥
 
ಪ್ರವಚನದ ಸಮಯದಲ್ಲಿ ನಡುಮನೆಯ ಭಟ್ಟರು

ವಿಧವಿಧದ ವೃಕ್ಷಗಳ ವಿವಿಧ ಹೆಸರರುಹಿದರೂ

"ಲಿಕುಚ" ಶಬ್ದದ ಅರ್ಥ ಹೇಳಲವರಸಮರ್ಥ
 

ತಂದೆಯ ಗೊಂದಲವ ಕಂಡ ಬಾಲಕನಾಗ

"ಲಿಕುಚ ಪದದರ್ಥವನು ಹೇಳಿ ಮುಂದರಿಯಿರಿ"

ಎಂದು ನುಡಿದನು ಅಲ್ಲಿ ಧೈರ್ಯದಲಿ ನಿಂದು
 
॥ ೨೯ ॥
 
ಕಂಗೆಟ್ಟ ಭಟ್ಟರಿಗೆ ಅರ್ಥ ತೋರಲೇ ಇಲ್ಲ

ತಿಳಿಯದಿಹ ಅರ್ಥವನ್ನು ಹೇಳಬಲ್ಲರು ಹೇಗೆ ?

ತವಕಗೊಂಡಾ ಮಂದಿ ಬಾಲಕಗೆ ಹೇಳಿದರು

"ನೀನಾದರೂ ಅರುಹು, ಈ ಪದದ ಅರ್ಥ"

"ಲಿಕುಚ" ವೆಂದರೆ ಅರ್ಥ "ಹೆಬ್ಬಲಸು" ಎಂದು
 

ಬಾಲಕನ ನುಡಿ ಕೇಳಿ ತಲೆದೂಗಿದರು ಮ೦ದಿ
 
॥ ೩೦ ॥
 
ಭಾವೀ ಬ್ರಹ್ಮನಿಗೆ ಬ್ರಹ್ಮೋಪದೇಶ
 

 
ವಾಸುದೇವನ ಪ್ರತಿಭೆ ಎಲ್ಲೆಡೆಯು ಹರಡಿತ್ತು.

ಬಹುವಿಧದ ಪರಿಯಲ್ಲಿ ಜನಜನಿತವಾಯ್ತು

ಚಕಿತಗೊಂಡಿತು ಲೋಕ ಚತುರಮತಿಯನು ಕಂಡು !
 

ವಾಸುದೇವನ ವಯಸು ಯೋಗ್ಯವಾದುದ ಅರಿತು

ಬ್ರಾಹ್ಮಣೋತ್ತಮರಾದ ಮಧ್ಯಗೇಹರು ಅಂದು

ಬ್ರಹೋಪದೇಶವನು ಮಾಡಲೆಳಸಿದರು
 
46 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
28
 
29
 
30
 
31
 
॥ ೩೧ ॥