This page has not been fully proofread.

ಲಿರುಚ ಕುಲಗುರುವಿನಿಂದ ಲಿಶುಭ ಕಬ್ದಾರ್ಥ
ನಡುಮನೆಯ ಭಟ್ಟರು ಖ್ಯಾತ ಪೌರಾಣಿಕರು
ಜನಜಾತ್ರೆ ಸೇರುವುದು ಅವರ ಪ್ರವಚನಕ
ಒಮ್ಮೆ ಆ ಊರಿನಲ್ಲಿ ಪ್ರವಚನದ ಕಾಲದಲಿ
ಜನರ ಮನ ಗೆಲಿದಿದ್ದ ವಾಸುದೇವನು ನಿಂದು
ವಾಚನವ ಮಾಡಿದ್ದ ಭಾಗವನೆ ಮತ್ತೊಮ್ಮೆ
ವಾಚನವ ಮಾಡಿರೆಂದರುಹಿದನು ತಂದೆಗೆ
 
ಪ್ರವಚನದ ಸಮಯದಲ್ಲಿ ನಡುಮನೆಯ ಭಟ್ಟರು
ವಿಧವಿಧದ ವೃಕ್ಷಗಳ ವಿವಿಧ ಹೆಸರರುಹಿದರೂ
"ಲಿಕುಚ" ಶಬ್ದದ ಅರ್ಥ ಹೇಳಲವರಸಮರ್ಥ
 
ತಂದೆಯ ಗೊಂದಲವ ಕಂಡ ಬಾಲಕನಾಗ
"ಲಿಕುಚ ಪದದರ್ಥವನು ಹೇಳಿ ಮುಂದರಿಯಿರಿ"
ಎಂದು ನುಡಿದನು ಅಲ್ಲಿ ಧೈರ್ಯದಲಿ ನಿಂದು
 
ಕಂಗೆಟ್ಟ ಭಟ್ಟರಿಗೆ ಅರ್ಥ ತೋರಲೇ ಇಲ್ಲ
ತಿಳಿಯದಿಹ ಅರ್ಥವನ್ನು ಹೇಳಬಲ್ಲರು ಹೇಗೆ ?
ತವಕಗೊಂಡಾ ಮಂದಿ ಬಾಲಕಗೆ ಹೇಳಿದರು
"ನೀನಾದರೂ ಅರುಹು, ಈ ಪದದ ಅರ್ಥ"
"ಲಿಕುಚ" ವೆಂದರೆ ಅರ್ಥ "ಹೆಬ್ಬಲಸು" ಎಂದು
 
ಬಾಲಕನ ನುಡಿ ಕೇಳಿ ತಲೆದೂಗಿದರು ಮ೦ದಿ
 
ಭಾವೀ ಬ್ರಹ್ಮನಿಗೆ ಬ್ರಹ್ಮಪದೇಶ
 
ವಾಸುದೇವನ ಪ್ರತಿಭೆ ಎಲ್ಲೆಡೆಯು ಹರಡಿತ್ತು.
ಬಹುವಿಧದ ಪರಿಯಲ್ಲಿ ಜನಜನಿತವಾಯ್ತು
ಚಕಿತಗೊಂಡಿತು ಲೋಕ ಚತುರಮತಿಯನು ಕಂಡು !
 
ವಾಸುದೇವನ ವಯಸು ಯೋಗ್ಯವಾದುದ ಅರಿತು
ಬ್ರಾಹ್ಮಣೋತ್ತಮರಾದ ಮಧ್ಯಗೇಹರು ಅಂದು
ಬ್ರಹೋಪದೇಶವನು ಮಾಡಲೆಳಸಿದರು
 
46 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
28
 
29
 
30
 
31