This page has been fully proofread once and needs a second look.

ನೆರೆದ ಜನರೆಲ್ಲರೂ ಬೆರಗಾಗಿ ನಿಂದರು

ಬಾಲಕನ ಧಾರ್ಷ್ಟ್ಯಕ್ಕೆ ತಲೆಯ ತೂಗಿದರು

ಮುಖಭಂಗ ಹೊಂದಿದಾ ಶಿವಭಟ್ಟನನ್ನು

ಲೆಕ್ಕಿಸದೆ ಹೋದರಾ ಬ್ರಾಹ್ಮಣನ ಜನರು

ಕೇಸರಿಯ ಶಿಶುವಿನಾ ಗರ್ಜನೆಯ ಕೇಳವರು
ಳ್ದವರು
ಊಳಿಡುವ ನರಿಯನ್ನು ಲೆಕ್ಕಿಸುವರೆ ?
 
॥ ೨೪ ॥
 
"ಶಿವಭಟ್ಟ ನುಡಿದದ್ದು ತಪ್ಪಾಯಿತೆ ?

ಸತ್ಯ ಸಂಗತಿಯನ್ನು ನೀನರುಹು ನಮಗೆ
 

ಹೀಗೆಂದ ಜನರಿಗೆ ವಾಸುದೇವನು ಆಗ
 

ತತ್ವಾರ್ಥ ಚಿಂತನೆಯ ಸತ್ಯಾರ್ಥ ಅರುಹಿದನು
 

ಹರುಷಗೊಂಡರು ಆಗ ದೇವಲೋಕದ ಸುರರು
 

ಮಧ್ವವೃಕ್ಷದ ಬೀಜ ಅಂಕುರಿಸಿತೆಂದು
 
॥ ೨೫ ॥
 
ಜನಮನವ ಗೆಲಿದಿದ್ದ ವಾಸುದೇವನು ಆಗ

ಮನೆಗೆ ಮರಳಿದ ಮತ್ತೆ ತಾಯಿಯೊಡಗೂಡಿ

ನಡೆದ ಸಂಗತಿಯೆಲ್ಲ ತಂದೆಗರುಹಿದ ಹಸುಳೆ

"ಶಿವಭಟ್ಟ ಪ್ರವಚನದಿ ಮಿಥೈಥ್ಯೆಯನು ನುಡಿದರು

ನಾನಾಗ ಸತ್ಯಾರ್ಥ ಜನರಿಗರುಹಿದನು
 

ನನ್ನ ನಡೆ ಸರಿಯಹುದೆ ?" ಎಂದನವ ತಂದೆಯೆಡೆ ನೋಡಿ
 
॥ ೨೬ ॥
 
"ಸತ್ಯವನೆ ನುಡಿದಿರುವೆ, ಓ ನನ್ನ ಮಗುವೆ!'
"
ಬಾಲಕನ ಪ್ರತಿಭೆಗೆ ಮಣಿದು ನುಡಿದನು ತಂದೆ

ಆಲೋಚಿಸಿದನಾತ ಹರಿಯ ಹಿರಿಮೆಯ ಕುರಿತು
 

ಹಸುಳೆಯ ಪ್ರಖರತೆಯು ದೇವವೃಂದಕೆ ಸಾ
ಟಿ
ಇಂಥ ಮಗನನು ಪಡೆದ ನನಗೆದೆಂಥ ಭಾಗ್ಯ !

ಎಂಥದೀ ಹರಿಕೃಪೆಯು, ಎಂಥ ಸೌಭಾಗ್ಯ !
 
ಮೂರನೆಯ ಸರ್ಗ / 45
 
24
 
25
 
26
 
27
 
॥ ೨೭ ॥