This page has been fully proofread once and needs a second look.

"ಈ ನನ್ನ ವರಪುತ್ರ ಪ್ರತಿಭೆಯ ಸಾಗರ

ಮಂದಿಯ ಕೆಡುನೋಟ ಕಾಡದಿರಲೀತನನು
 

ತಟ್ಟದಿರಲೀತನಿಗೆ ದುಷ್ಟ ಗ್ರಹ ಪೀಡೆಗಳು"
 

ಹೀಗೆಂದು ಯೋಚಿಸಿದ ವಾಸುದೇವನ ತಂದೆ
 

ಮಗುವನ್ನು ಕರೆದೊಯ್ದು ಏಕಾಂತ ತಾಣದಲಿ

ಅಕ್ಷರಾಭ್ಯಾಸವನ್ನು ಮುಂದುವರಿಸಿದನು
 
॥ ೨೦ ॥
 
ಶಿವಾದಿವಂದ್ಯನಿಂದ ಶಿವಭಟ್ಟನ ಪರಾಭವ
 

 
ವಾಸುದೇವನ ಖ್ಯಾತಿ ಜನಜನಿತವಾಯಿತು.

ಆತನಾ ಅಪ್ರತಿಮ ವಾಗ್ರಿಯ ಪ್ಸ್ರೋತ !

ಶಾಸ್ತ್ರಗಳ ಪಠಣಕ್ಕೆ ಮಧುರವಾಣಿಯ ಮೆರುಗು !
"ಧೃ

"ಘೃ
ತವಲ್ಲಿ " ಎಂಬಲ್ಲಿ ಸಂಭ್ರಮದ ಮದುವೆ
 

ತಾಯಿಯೊಡಗೂಡಿ ವಾಸುದೇವನು ಅಂದು
 

ತೆರಳಿದನು ಮದುವೆಯಲ್ಲಿ ಪಾಲ್ಗೊಳ್ಳಲು
 
॥ ೨೧ ॥
 
ಶಿವಭಟ್ಟನೆಂಬೊಬ್ಬ ಬ್ರಾಹ್ಮಣನು ಅಲ್ಲಿದ್ದ
"ಭೌ

"ಧೌ
ತಪಟ " ಎಂವೆಂಬೊಂದು ವಂಶಸ್ಥನವನು

ಶ್ರೇಷ್ಠ ಪೌರಾಣಿಕನೆಂದು ಹೆಸರ ಗಳಿಸಿದ್ದವನು

ಆತನಾ ಪ್ರವಚನವ ಕೇಳುತ್ತ ಜನರೆಲ್ಲ

ಸುತ್ತಲೂ ಕುಳಿತಿದ್ದರಾಸಕ್ತಿಯಿಂದ
 

ಅವರೊಡನೆ ಕುಳಿತಿದ್ದ ವಾಸುದೇವನೂ ಅಲಿ
 
ಲ್ಲಿ ॥ ೨೨ ॥
 
ವಾಕ್ಯಾರ್ಥ ಚತುರನಾ ವಾಸುದೇವನು ಆಗ

ಮೆಲುನಗೆಯ ಮೊಗದಿಂದ, ಕಂಗಳಿನ ಹೊಳಪಿಂದ
 
ಶೋ

ಶ್ರೋ
ತೃಗಳ ಮಧ್ಯದಲಿ ನಿಂದು ಉಸುರಿದನು

"ಸರಿಯಲ್ಲ ನಿಮ್ಮ ನುಡಿ ಕ್ಷಮಿಸಿ ಗುರುವರ್ಯ!

ವ್ಯಾಸ, ಶುಕರಂತಹ ಜ್ಞಾನಿಗಳ ತತ್ವಕ್ಕೆ

ಸರಿ ಹೊಂದಲಾರದು, ನಿಮ್ಮ ಹೇಳಿಕೆಯು
 
44 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
20
 
21
 
22
 
23
 
" ॥ ೨೩ ॥