We're performing server updates until 1 November. Learn more.

This page has not been fully proofread.

"ಈ ನನ್ನ ವರಪುತ್ರ ಪ್ರತಿಭೆಯ ಸಾಗರ
ಮಂದಿಯ ಕೆಡುನೋಟ ಕಾಡದಿರಲೀತನನು
 
ತಟ್ಟದಿರಲೀತನಿಗೆ ದುಷ್ಟ ಗ್ರಹ ಪೀಡೆಗಳು"
 
ಹೀಗೆಂದು ಯೋಚಿಸಿದ ವಾಸುದೇವನ ತಂದೆ
 
ಮಗುವನ್ನು ಕರೆದೊಯ್ದು ಏಕಾಂತ ತಾಣದಲಿ
ಅಕ್ಷರಾಭ್ಯಾಸವನ್ನು ಮುಂದುವರಿಸಿದನು
 
ಶಿವಾದಿವಂದ್ಯನಿಂದ ಶಿವಭಟ್ಟನ ಪರಾಭವ
 
ವಾಸುದೇವನ ಖ್ಯಾತಿ ಜನಜನಿತವಾಯಿತು.
ಆತನಾ ಅಪ್ರತಿಮ ವಾಗ್ಟರಿಯ ಪ್ರೋತ !
ಶಾಸ್ತ್ರಗಳ ಪಠಣಕ್ಕೆ ಮಧುರವಾಣಿಯ ಮೆರುಗು !
"ಧೃತವಲ್ಲಿ " ಎಂಬಲ್ಲಿ ಸಂಭ್ರಮದ ಮದುವೆ
 
ತಾಯಿಯೊಡಗೂಡಿ ವಾಸುದೇವನು ಅಂದು
 
ತೆರಳಿದನು ಮದುವೆಯಲ್ಲಿ ಪಾಲ್ಗೊಳ್ಳಲು
 
ಶಿವಭಟ್ಟನೆಂಬೊಬ್ಬ ಬ್ರಾಹ್ಮಣನು ಅಲ್ಲಿದ್ದ
"ಭೌತಪಟ " ಎಂಬೊಂದು ವಂಶಸ್ಥನವನು
ಶ್ರೇಷ್ಠ ಪೌರಾಣಿಕನೆಂದು ಹೆಸರ ಗಳಿಸಿದ್ದವನು
ಆತನಾ ಪ್ರವಚನವ ಕೇಳುತ್ತ ಜನರೆಲ್ಲ
ಸುತ್ತಲೂ ಕುಳಿತಿದ್ದರಾಸಕ್ತಿಯಿಂದ
 
ಅವರೊಡನೆ ಕುಳಿತಿದ ವಾಸುದೇವನೂ ಅಲಿ
 
ವಾಕ್ಯಾರ್ಥ ಚತುರನಾ ವಾಸುದೇವನು ಆಗ
ಮೆಲುನಗೆಯ ಮೊಗದಿಂದ, ಕಂಗಳಿನ ಹೊಳಪಿಂದ
 
ಶೋತೃಗಳ ಮಧ್ಯದಲಿ ನಿಂದು ಉಸುರಿದನು
"ಸರಿಯಲ್ಲ ನಿಮ್ಮ ನುಡಿ ಕ್ಷಮಿಸಿ ಗುರುವರ!
ವ್ಯಾಸ, ಶುಕರಂತಹ ಜ್ಞಾನಿಗಳ ತತ್ವಕ್ಕೆ
ಸರಿ ಹೊಂದಲಾರದು, ನಿಮ್ಮ ಹೇಳಿಕೆಯು
 
44 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
20
 
21
 
22
 
23