This page has been fully proofread once and needs a second look.

ತಂದೆಯಾಡಿದ ಮಾತನಾಲಿಸಿದ ಹಸುಳೆ

ತಾವರೆಯ ಕಂಗಳಿನ ಆ ವಾಸುದೇವ
 

ಮುದಗೊಳಿಪ ತೊದಲು ನುಡಿಗಳಿಂತಂತೆಂದು ನುಡಿದ

"ಮದುವೆಯ ಮನೆಯಿಂದ ಹೊರಹೊರಟೆ ನಾನು
 

ಕುಡುವೂರ ಸ್ವಾಮಿಯು ಎಡಬಿಡದೆ ಜೊತೆಯಿದ್ದ

ಅಲ್ಲಿಂದ ಮುಂದೆಯೂ ಶ್ರೀಹರಿಯೇ ಸಂಗಾತಿ"
 
॥ ೧೨ ॥
 
"ಕುಡುವೂರ ಸ್ವಾಮಿಗೆ ನಮನವನ್ನರ್ಪಿಸಿದೆ

ಮುಂದಕ್ಕೆ ಹೊರಟೆ, ತಾಳೆಕುಣಿಡೆ ಕಡೆಗೆ

ತಾಳೆಕುಡೆಯಿಂದ ಪೂರ್ವಕ್ಕೆ ಸರಿದು

ಚಂದ್ರಮೌಳೇಶ್ವರನ ಮಂದಿರಕೆ ಬಂದೆ

ಆತನೊಳಗಿರುವ ಶ್ರೀಹರಿಗೆ ವಂದಿಸಿ

ಮುಂದುವರಿದೆನು ನಾನು ಶ್ರೀಹರಿಯ ಕೂ
 
ಡೆ ॥ ೧೩ ॥
 
"ಮುಂದರಿಸಿ ಪಯಣವನು ಹಲವಾರು ಮೈಲಿ

ಮೂಡಲಾಲಯ ಸ್ವಾಮಿಯಂತರ್ಯಾಮಿ

ಕಮಲನಾಭನ ಕೂಡೆ ಇಲ್ಲಿ ಬಂದೆ

ಸೇವಿಸಿದೆ ಶ್ರೀ ಹರಿಯ ಬಲು ಭಕ್ತಿಯಿಂದ
 
"
ಇಂತಂತೆಂದು ನುಡಿದಾ ಮಗುವ ಮಾತನು ಕೇಳಿ
 

ವಿಸ್ಮಯದಿ ಜನರೆಲ್ಲ ಬೆರಗಾಗಿ ನೋಡಿದರು
 
॥ ೧೪ ॥
 
"ಬಂಧು ಜನರನು ತೊರೆದು ಒಬ್ಬೊಂಟಿಯಾಗಿ

ವಿವಿಧ ಭೂತಗಳಿರುವ ಭೀಕರ ಪ್ರಾಂತದಲ್ಲಿ

ಏಕಾಂಗಿಯಾಗಿಯೇ ಚಲಿಸುವನು ಬಾಲ

ಅಲ್ಪ ಭಾಗ್ಯನು ನಾನು ! ನನಗಾರು ಗತಿಯಿಲ್ಲ

ಕರುಣಾಳು ಸ್ವಾಮಿಯೇ ಬಾಲಕನ ಪಾಲಿಸು
"
ಇಂತು ಪ್ರಾರ್ಥಿಸಿ ವಿಪ್ರ ಹರಿಗೆ ನಮಿಸಿದನು
 
42 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
12
 
13
 
14
 
॥ ೧೫ ॥
 
 
 
 
 
 
15