This page has been fully proofread once and needs a second look.

ಕಾಣದಾದರು ಮಗನ, ಮಧ್ಯಗೇಹರು ಇತ್ತ

ಮಗನ ಮಮತೆಯ ಮೋಹ ಅವರನಾವರಿಸಿತ್ತು

ದಾರಿಯಲ್ಲಿ ನಡೆದರು ಪರಿತಾಪ ಪಡುತ
 

ಹಿಂಬಾಲಿಸಿದರವರು ಮಗುವ ಹೆಜ್ಜೆಯ ಗುರುತ

"ಮಗುವ ಕಂಡಿರಾ ನೀವು ?" ಎಂಬ ಪ್ರಶ್ನೆಯ ಹೊತ್ತು

ಹೆಜ್ಜೆ ಹೆಜ್ಜೆಗೂ ಅವರು ದಾರಿಗರ ಕೇಳಿದರು.
 
॥ ೮ ॥
 
ಮಗುವ ಮುಖವೆಂಬೊಂದು ಕಮಲದ ಪುಷ್ಪವನ್ನು

ಮಧ್ಯಗೇಹರು ಎಂಬ ದುಂಬಿ ಅರಸಿತ್ತು

ಪುರಜನರು ದುಂಬಿಗೆ ಗಾಳಿಯಂತಾದರು

ಕಮಲಪುಷ್ಪದ ಇರವು ಅವರಿಂದ ತಿಳಿಯಿತು

ಅಂತ್ಯದಲ್ಲಿ ದೊರಕಿತ್ತು ಮಧುಕರನಿಗೆ
 

ನಗೆಯಿಂದ ಅರಳಿದ ಮಗುವ ಮುಖಕಮಲ
 
॥ ೯ ॥
 
ಮಗುವ ವಿರಹದ ನೋವು ಕಣ್ಣೀರ ತಂದಿತ್ತು

ಅಮಂಗಲವ ಸಾರುವ ದುಃಖಾಶುಶ್ರುವನ್ನು

ಮಧ್ಯಗೇಹರು ಒಡನೆ ತೊಡೆದು ಹಾಕಿದರು
 

ಪುತ್ರದರ್ಶನ ಭಾಗ್ಯ ಸಂತಸವ ತಂದಿತ್ತು

ಆನಂದಬಾಷ್ಪವನೂ ಅವರು ನಿಗ್ರಹಿಸಿ

ವಾಸುದೇವನ ಕುರಿತು ಹೀಗೆಂದರು
 
॥ ೧೦ ॥
 
"ಸರಿಯಾಗಿ ಅರುಹು, ಮಗು, ನನಗೆಲ್ಲವನ್ನೂ

ಬಂಧು ಜನರನ್ನು ತೊರೆದು ಒಬ್ಬೊಂಟಿಯಾಗಿ

ಏಕೆ ಬಂದಿಹೆ ನೀನು ಇಷ್ಟೊಂದು ದೂರ ?

ಏನು ಅರಿಯದ ಮೂರು ವರ್ಷದ ಹಸುಳೆ, ಶಿಶುವು
 

ಹೇಗೆ ಕ್ರಮಿಸಿದೆ ನೀನು ಇಷ್ಟೊಂದು ದೂರ ?
 

ನಿನ್ನ ಜೊತೆ ಯಾರಿದು ನೆರವ ನೀಡಿದರು ?"
 
ಮೂರನೆಯ ಸರ್ಗ / 41
 
10
 
11
 
॥ ೧೧ ॥