This page has been fully proofread once and needs a second look.

ವಾಸುದೇವನು ಹಾದಿ ತ್ವರೆಯಿಂದ ಕ್ರಮಿಸಿದನು

ಕುಡುವೂರು ಎಂಬಲ್ಲಿ ದೇವಸದನಕೆ ಬಂದು

ರುದ್ರನೊಳು ನೆಲೆಸಿರುವ ಹರಿಗೆ ನಮಿಸಿದನು

ಅಲ್ಲಿಂದ ಶೀಘ್ರದಲ್ಲಿ ಹೊರ ಹೊರಟ ಬಾಲಕ

ತಾಳೆಕುಡೆ ಎಂಬೊಂದು ಹೆಸರಾಂತ ದೇಗುಲದಿ

ದೇವಾಧಿದೇವನಿಗೆ ವಂದನೆಯನರ್ಪಿಸಿದ
 
॥ ೪ ॥
 
ಜನರ ಮನ, ನಯನಗಳ ಕಮಲಗಳಿಗೆ

ಸೂರ್ಯನಾ ಪರಿಯಲ್ಲಿ ಆನಂದವೀಯುವ

ವಾಸುದೇವನು ಪಡೆದ ಹರಿಯ ದರ್ಶನವ
 

ಇದರಿಂದ ಪೊಂದಿದ ಸಂತೋಷದಿಂದಾಗಿ

ಮತ್ತೊಮ್ಮೆ, ಅರಳಿದ ನಯನಗಳ ಸಹಿತ
 

ಮರಳಿದನು ಆ ಬಾಲ ರಜತಪೀಠಾಪುರಕೆ
 
॥ ೫ ॥
 
ಅನಂತಾಸನನನ್ನು ಪೂಜಿಸಿದ ಬಾಲಕ

ಪರಿಪರಿಯ ವಿಧದಲ್ಲಿ ,ಏಕಾಗ್ರ ಚಿತ್ರದುತದಲಿ.

ಚಕಿತಗೊಂಡರು ಸುರರು, ಭೂಸುರರು ಎಲ್ಲ.

ವಾಸುದೇವನು ಸ್ತುತಿಪ ಪರಿಯ ಕಂಡೆಂದರು

"ಶ್ರೀಹರಿಗೆ ಸಲ್ಲಿಸಿದ ವಾಯುದೇವರ ನಮನ

ಹಲವಾರು ಉತ್ಕೃಷ್ಟ ಅಶ್ವಮೇಧಕೂ ಮಿಗಿಲು
 
" ॥ ೬ ॥
 
ವಾಯುದೇವರ ಪರಿಯು ಇಂತಲೇ ಇಹುದು

ಎಂದೆಂದೂ ಶ್ರೀಹರಿಗೆ ವಂದನೆಯ ಸಲಿಸುವರು

ಶ್ರೀ ಹರಿಯನೆಂದೆಂದೂ ಕಾಣುತ್ತಲಿರುವವರು

ಎಂದೆಂದೂ ದೇವನನು ಪಾಡಿ ಪೊಗಳುವರು

ಹರಿಪೂಜೆಯ ನಿಷ್ಠೆ ಜನ ಅರಿಯಲೆಂದೇ

ಈ ಪರಿಯ ವೈಶಿಷ್ಟ್ಯ, ಪೂಜಾ ವಿಶೇಷ
 
40 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
5
 
7
 
॥ ೭ ॥