This page has not been fully proofread.

ವಾಸುದೇವನು ಹಾದಿ ತ್ವರೆಯಿಂದ ಕ್ರಮಿಸಿದನು
ಕುಡುವೂರು ಎಂಬಲ್ಲಿ ದೇವಸದನಕೆ ಬಂದು
ರುದ್ರನೊಳು ನೆಲೆಸಿರುವ ಹರಿಗೆ ನಮಿಸಿದನು
ಅಲ್ಲಿಂದ ಶೀಘ್ರದಲ್ಲಿ ಹೊರ ಹೊರಟ ಬಾಲಕ
ತಾಳೆಕುರ ಎಂಬೊಂದು ಹೆಸರಾಂತ ದೇಗುಲದಿ
ದೇವಾಧಿದೇವನಿಗೆ ವಂದನೆಯನರ್ಪಿಸಿದ
 
ಜನರ ಮನ, ನಯನಗಳ ಕಮಲಗಳಿಗೆ
ಸೂರನಾ ಪರಿಯಲ್ಲಿ ಆನಂದವೀಯುವ
ವಾಸುದೇವನು ಪಡೆದ ಹರಿಯ ದರ್ಶನವ
 
ಇದರಿಂದ ಪೊಂದಿದ ಸಂತೋಷದಿಂದಾಗಿ
ಮತ್ತೊಮ್ಮೆ, ಅರಳಿದ ನಯನಗಳ ಸಹಿತ
 
ಮರಳಿದನು ಆ ಬಾಲ ರಜತಪೀಠಾಪುರಕೆ
 
ಅನಂತಾಸನನನ್ನು ಪೂಜಿಸಿದ ಬಾಲಕ
ಪರಿಪರಿಯ ವಿಧದಲ್ಲಿ ಏಕಾಗ್ರ ಚಿತ್ರದು.
ಚಕಿತಗೊಂಡರು ಸುರರು, ಭೂಸುರರು ಎಲ್ಲ.
ವಾಸುದೇವನು ಸ್ತುತಿಪ ಪರಿಯ ಕಂಡೆಂದರು
"ಶ್ರೀಹರಿಗೆ ಸಲ್ಲಿಸಿದ ವಾಯುದೇವರ ನಮನ
ಹಲವಾರು ಉತ್ಕೃಷ್ಟ ಅಶ್ವಮೇಧಕೂ ಮಿಗಿಲು
 
ವಾಯುದೇವರ ಪರಿಯು ಇಂತಲೇ ಇಹುದು
ಎಂದೆಂದೂ ಶ್ರೀಹರಿಗೆ ವಂದನೆಯ ಸಲಿಸುವರು
ಶ್ರೀ ಹರಿಯನೆಂದೆಂದೂ ಕಾಣುತ್ತಲಿರುವವರು
ಎಂದೆಂದೂ ದೇವನನು ಪಾಡಿ ಪೊಗಳುವರು
ಹರಿಪೂಜೆಯ ನಿಷ್ಠೆ ಜನ ಅರಿಯಲೆಂದೇ
ಈ ಪರಿಯ ವೈಶಿಷ್ಟ್ಯ, ಪೂಜಾ ವಿಶೇಷ
 
40 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
5
 
7