This page has been fully proofread once and needs a second look.

ತಂದೆಯ ಸಾಲವನ್ನು ತೀರಿಸಿದ್ದು

 
ವಾಸುದೇವನು ಒಮ್ಮೆ ಆಟವನ್ನು ಮುಗಿಸಿ

ಭೋಜನಕೆ ಬರಲೆಂದು ತಂದೆಯನ್ನು ಕರೆದ
 

ಮಗನ ನೋಡುತ ಭಟ್ಟರುಸುರಿದರು ಕಿವಿಯಲ್ಲಿ

"ವೃಷಭವ್ಯಾಪಾರಿಯು ಇಂದು ಬಂದಿಹನು
 

ಅವನ ಹಣ ಕೊಡದಿರೆ ಅವ ಊಟ ಮಾಡು
ಡನು
ಅದರಿಂದ ನಮಗೂ ಊಟವೇ ಇಲ್ಲ"
 
॥ ೫೦ ॥
 
ತಂದೆಯಾ ವ್ಯಾಕುಲದ ನುಡಿಗಳನ್ನು ಆಲಿಸಿ

ಮೆಲುನಗೆಯ ಸೂಸಿದನು ವಾಸುದೇವ

ಆಟವಾಡುವ ತನ್ನ ಎಳೆಯ ಕೈಯಿಂದ

ಸಾಲಿಗನ ಸಾಲವನು ತೀರಿಸುವ ಪರಿಯಲ್ಲಿ

ಬೊಗಸೆಗೈಗಳ ತುಂಬ ಹುಣಿಸೆಬೀಜವ ತುಂಬಿ

ನೀಡಲಾ ಧನಿಕನು ಸ್ವೀಕರಿಸಿ ಹರಸಿದನು
 
॥ ೫೧ ॥
 
ಕೆಲವು ಕಾಲದ ಬಳಿಕ ಮಧ್ಯಗೇಹರು ಮತ್ತೆ

ಧನಿಕನೆಡೆ ತೆರಳಿದರು ಸಾಲ ಹಿಂದಿರುಗಿಸಲು

ಅಚ್ಚರಿಯ ತೋರಿದಾ ಧನಿಕನಿಂತೆಂದ

"ಹಣವನ್ನು ನಿಮ್ಮ ಮಗ ಕೊಟ್ಟಾಯಿತಾಗಲೇ
"
ಇಂತು ಈ ಪರಿಯಲಾ ವ್ಯಾಪಾರಿಯು

ಮೋಕ್ಷವನ್ನು ಗಳಿಸಿದನು ಬೀಜರೂಪದಲಿ
 
॥ ೫೨ ॥
 
ಪರಿಪರಿಯ ಇಂತಹ ಬಾಲಲೀಲೆಗಳಿಂದ
 

ವಸುದೇವ ತನಯ ಕೃಷ್ಣನಾ ತೆರದಲ್ಲಿ
 
ಲಿ
ವಾಸುದೇವನು ತೋರ್ದ ಲೀಲಾ ವಿಲಾಸವನ್ನು
ನು
ಜನ ನೋಡಿ ನಲಿದರು ತುಂಬು ಮನದಿಂದ

ವಾಯುದೇವರ ರೂಪ ವಾಸುದೇವನದು
 

ಅವನ ಲೀಲೆಗಳೆಲ್ಲ ಕೃಷ್ಣಲೀಲೆಗಳಂತೆ
 
34 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
50
 
51
 
52
 
53
 
॥ ೫೩ ॥