This page has been fully proofread once and needs a second look.

ಉದ್ದನೆಯ ಕೋಡುಗಳ ಭವ್ಯ ವೃಷಭ !

ತನ್ನ ಪಾದಗಳಿಂದ ಭೂತಲವನಾವರಿಸಿ

ಶ್ರೇಷ್ಠತಮ ಒಂಭತ್ತು ದ್ವಾರದಿಂ ಶೋಭಿಸಿದ

ಭವ್ಯತೆಯೆ ಮೈಮೆವೆತ್ತಿ ಬಂದಂಥ ವೃಷಭ!
 

ಅದರ ಬಾಲವ ಹಿಡಿದು ಹೊರಟಿದ್ದ ಬಾಲ
 

ಉದಯಗಿರಿಯಾಶ್ರಿತ ರವಿಯತಯಂತೆ ಶೋಭಿಸಿದ
 
॥ ೪೬ ॥
 
ಎಲ್ಲಿ ಹೋದನು ಬಾಲ ? ಎಲ್ಲೆಲ್ಲಿ ಹುಡುಕಿದರೂ ಇಲ್ಲವಲ್ಲ ?
 

ಸುಳ್ಳು ಆಟವ ಕಟ್ಟಿ ಮನೆಯಲ್ಲಿಲೆ ಅಡಗಿಹನೆನೊ ?

ಸ್ವಚ್ಛಂದ ಆಟದಲ್ಲಿ ಬಾವಿಯಲ್ಲಿ ಬಿದ್ದನೋ ?

ಪರಿಪರಿಯ ಚಿಂತೆಯಲ್ಲಿ ಮುಳುಗಿದ ಬಂಧುಗಳು

ಹುಡುಕಿದರು ಮಗುವನ್ನು ಮೂಲೆ ಮೂಲೆಗಳಲ್ಲಿ
 

ಕಾಣದಾ ಬಾಲನನ್ನು ಕುರಿತು ಪರಿತಪಿಸಿದರು
 
॥ ೪೭ ॥
 
ಕಾಡಿನಿಂದಲಿ ಬಂದ ಗೋಪಾಲ ಹೇಳಿದನು

"ಮಗುವ ಕಂಡೆನು ಸ್ವಾಮಿ, ಕಾಡಿನಲ್ಲಿ

ಎತ್ತ ಬಾಲವ ಹಿಡಿದು ಓಡಿತ್ತು ಮಗುವು
"
ನಂಬದಾದರು ಜನ ಈ ಮಾತ ಕೇ
 
ಳಿ
ಸಂಜೆ ಮರಳಿತು ಮಗುವು ಎತ್ತಿನ ಹಿಂದೆ !

ಬೆರಗಾಗಿ ನೋಡಿದರು ಊರ ಜನರೆಲ್ಲ
 
॥ ೪೮ ॥
 
ಇಷ್ಟಾರ್ಥವೀಯುವ ಶ್ರೇಷ್ಠ ಚಿಂತಾಮಣಿಯು

ಬಡವನೊಬ್ಬನ ಬಳಿಯೆ ಬಂದು ಬಿದ್ದಂತೆ

ಶ್ರೀ ಹರಿಯ ಭಕ್ತನಿಗೆ ವೇದಾರ್ಥ ಹೊಳೆದಂ
ತೆ
ಕಳೆದು ಹೋದಾ ಮಗುವು ಮರಳಿ ಬಂದದ್ದು

ಸಂತಸವ ತಂದಿತು ಬಂಧು ಜನರೆಲ್ಲರಿಗೂ

ಊರ ದೇವರ ಕರುಣೆ ತಮಗಾಯಿತಂತೆಂದರು
 
ಎರಡನೆಯ ಮಗ / 33
 
46
 
47
 
48
 
49
 
॥ ೪೯ ॥