This page has not been fully proofread.

ಉದ್ದನೆಯ ಕೋಡುಗಳ ಭವ್ಯ ವೃಷಭ !
ತನ್ನ ಪಾದಗಳಿಂದ ಭೂತಲವನಾವರಿಸಿ
ಶ್ರೇಷ್ಠತಮ ಒಂಭತ್ತು ದ್ವಾರದಿಂ ಶೋಭಿಸಿದ
ಭವ್ಯತೆಯ ಮೈಮೆತ್ತಿ ಬಂದಂಥ ವೃಷಭ!
 
ಅದರ ಬಾಲವ ಹಿಡಿದು ಹೊರಟಿದ ಬಾಲ
 
ಉದಯಗಿರಿಯಾಶ್ರಿತ ರವಿಯತ ಶೋಭಿಸಿದ
 
ಎಲ್ಲಿ ಹೋದನು ಬಾಲ ? ಎಲ್ಲಿ ಹುಡುಕಿದರೂ ಇಲ್ಲವಲ್ಲ ?
 
ಸುಳ್ಳು ಆಟವ ಕಟ್ಟಿ ಮನೆಯಲ್ಲಿ ಅಡಗಿಹನೆ ?
ಸ್ವಚ್ಛಂದ ಆಟದಲ್ಲಿ ಬಾವಿಯಲ್ಲಿ ಬಿದ್ದನೋ ?
ಪರಿಪರಿಯ ಚಿಂತೆಯಲ್ಲಿ ಮುಳುಗಿದ ಬಂಧುಗಳು
ಹುಡುಕಿದರು ಮಗುವನ್ನು ಮೂಲೆ ಮೂಲೆಗಳಲ್ಲಿ
 
ಕಾಣದಾ ಬಾಲನನ್ನು ಕುರಿತು ಪರಿತಪಿಸಿದರು
 
ಕಾಡಿನಿಂದ ಬಂದ ಗೋಪಾಲ ಹೇಳಿದನು
"ಮಗುವ ಕಂಡನು ಸ್ವಾಮಿ, ಕಾಡಿನಲ್ಲಿ
ಎತ್ತ ಬಾಲವ ಹಿಡಿದು ಓಡಿತ್ತು ಮಗುವು
ನಂಬದಾದರು ಜನ ಈ ಮಾತ ಕೇ
 
ಸಂಜೆ ಮರಳಿತು ಮಗುವು ಎತ್ತಿನ ಹಿಂದೆ !
ಬೆರಗಾಗಿ ನೋಡಿದರು ಊರ ಜನರೆಲ್ಲ
 
ಇಷ್ಟಾರ್ಥವೀಯುವ ಶ್ರೇಷ್ಠ ಚಿಂತಾಮಣಿಯು
ಬಡವನೊಬ್ಬನ ಬಳಿಯ ಬಂದು ಬಿದ್ದಂತೆ
ಶ್ರೀ ಹರಿಯ ಭಕ್ತನಿಗೆ ವೇದಾರ್ಥ ಹೊಳೆದಂತ
ಕಳೆದು ಹೋದಾ ಮಗುವು ಮರಳಿ ಬಂದದ್ದು
ಸಂತಸವ ತಂದಿತು ಬಂಧು ಜನರೆಲ್ಲರಿಗೂ
ಊರ ದೇವರ ಕರುಣೆ ತಮಗಾಯಿತಂದರು
 
ಎರಡನೆಯ ಮಗ / 33
 
46
 
47
 
48
 
49