This page has been fully proofread once and needs a second look.

ವಾಣೀಪತಿಯ ತೊದಲ್ನುಡಿ
 

 
ವಾಸುದೇವನು ಎಂದು ನುಡಿಯತೊಡಗುವನೆಂದು
 

ಕಾತುರದಿ ಕಾದಿತ್ತು ದೇವವೃಂದವು ಅಂದು

ಭಾರತಿಗೆ ಪತಿಯ ನಾಲಿಗೆಯೊಳಿರಲು ನಾಚಿಕೆಯೋ ಎಂಬಂ
 
ತೆ
ಬ್ರಹ್ಮ ಸಭೆಯಲಿ ವಾಣಿ, ಲಜ್ಜೆಯಿಂದಲಿ ತಾನು
 

ತೆರೆಯ ಮರೆಯಿಂದ ಮಲಮಲನಮೆಲಮೆಲನೆ ಬರುವು
ವಂತೆ
ಮಗುವು ರಂಜಿಸಿತು ತನ್ನ ತೊದಲುನುಡಿಯಿಂದ
 
॥ ೪೩ ॥
 
ಜಗಚ್ಚೇಷ್ಟನು ಅಂಬೆಗಾಲಿಟ್ಟದ್ದು

 
ಅಂಬೆಗಾಲಿಕ್ಕುತ್ತ ಮೊದಮೊದಲು ನಡೆದು

ಸಾವಧಾನದಿ ಎದ್ದು ತೊಡರುತ್ತ ನಿಲುವುದು

ತೊಡರು ಹೆಜ್ಜೆಗಳಿಂದ ಎಡವುತ್ತ ನಡೆಯುವುದು

ಇಂಥ ಆಟಗಳಿಂದ ವಾಸುದೇವನು ನ
 
ಲಿದ
ಜಗದೆಲ್ಲ ಕಾವ್ರ್ಯಗಳೂ ಯಾರಿಂದ ನಡೆಯುವುದೋ

ಅವನ ಆ ಲೀಲೆಗಳು ಎಂತಹ ಚೋದ್ಯ !
 
॥ ೪೪ ॥
 
ಎತ್ತಿನ ಬಾಲ ಹಿಡಿದು ಕಾಡಿಗೆ ತೆರಳಿದ ಪ್ರಸಂಗ
 

 
ಒಂದು ದಿನ ಮುಂಜಾನೆ ಹಟ್ಟಿಯಲ್ಲಿನ ಎತ್ತು

ಕಾಡಲ್ಲಿ ಬಗೆಬಗೆಯ ಮೇವನರಸುತ ಹೊರಟು

ಮನೆಯಿಂದ ಸಾಗಿತ್ತು ಬಲು ದೂರ ದೂರ

ತನ್ನ ಮನ ಗೆದ್ದಿದ್ದ ಬಸವ ಬಾಲವ ಹಿಡಿದು

ಹಟ್ಟಿಯನ್ನು ಹಿಂದಿಟ್ಟು ಪುಟ್ಟನೂ ಹೊರಟ

ಅವನ ಕಾಣದ ಜನರು ಕಂಗೆಟ್ಟು ಹೋದರು
 
32 / ಶ್ರೀ ಮಧ್ವ ವಿಜಯ ಕನ್ನಡ ಕಾವ್ಯ
 
43
 
44
 
45
 
॥ ೪೫ ॥