This page has been fully proofread once and needs a second look.

ಇತ್ತ ಆ ತಾಯಿಯು ಬಲು ವ್ಯಸನಗೊಡಳು

ಹಾಲ ಮನಸಿನ ಮಗುವು ರೋದಿಸುತ್ತಿರಬೇಕು

ಪರರ ಕೆಲಸಗಳಲ್ಲಿ ಆಸಕ್ತಿ ತೋರಿ

ಮಗುವನ್ನು
ಮರೆತ ಎನಗೆ ಧಿಕ್ಕಾರವಿರಲಿ
 

ಮನೆಯೆಡೆಗೆ ಲಗುಬಗನೆ ಮರಳಿದಳು ವನಿ
 
ತೆ
ಹೊಟ್ಟೆ ತುಂಬಿದ ಮಗುವ ಕಂಡು ನಲಿದಾಡಿದಳು
 
॥ ೩೯ ॥
 
ಜರುಗಿದ ಸಂಗತಿಯ ಅರುಹಿದಳು ಮಗಳು
 

ಏರುಜವ್ವನಿಗರಿಗೂ ಪಚನವಾಗದ ಹುರುಳಿ

ಹಸುಗೂಸಿಗಿನ್ನೆಂಥ ಆಪತ್ತು ತರುವುದೋ ?
 

ಮಗು ಪಡುವ ಬವಣೆಯನ್ನು ನೆನೆದು ಹಲುಬಿದಳು

ಪರಿಪರಿಯ ರೀತಿಯಲ್ಲಿ ಮಗಳ ತೆಗಳಿದಳು
 

ಮುಂಬರುವ ಘಟನೆಯನ್ನು ಕುರಿತು ಪರಿತಪಿಸಿದಳು.
 
॥ ೪೦ ॥
 
ಮಗುವಿನಾ ಆರೋಗ್ಯ ಕಿಂಚಿತ್ತು ಕೊಕೆಡಲಿಲ್ಲ

ಇದ ಕಂಡ ತಾಯಿಗೆ ಎಲ್ಲಿಲ್ಲದಚ್ಚರಿ!

ಸಾಗರದ ಮಥನದ ಕಾಲದಲ್ಲಿ ಈ "ಶಿಶುವು
"
ಕಾಲಕೂಟದ ವಿಷವ ಸುಲಭದಲ್ಲಿ ಕುಡಿದಿತ್ತು.

ಮೂರುಲೋಕದ ತಾಯಿ ಶ್ರೀ ಹರಿಯ ರಾಣಿ

ಅಚ್ಚರಿಯ ಪಡಲಿಲ್ಲ "ಮಗುವ " ಸಾಹಸ ಕಂಡು
 
॥ ೪೧ ॥
 
ಶಿಶುವನ್ನು ತೊಡೆಯ ಮೇಲಿರಿಸಿಕೊಂಡಾ ತಂದೆ

ಪರಿಪರಿಯ ಮಂತ್ರಗಳ ಜಪಿಸತೊಡಗಿದರು

ಆನಂದದಲಿ ತಾಯಿ ಸ್ತನವನೂಡಿಸಿದಳು

ಇದನು ಕೇಳಿದ ಇತರ ಜನರು ಎಲ್ಲರಿಗೂ

ಆನಂದ, ಆಹ್ಲಾದ, ಸಂತಸವು ಉಂಟಾಯ್ತು

ಮಗುವ ಮೆಲುನಗೆಯ ಅಮೃತವ ಸವಿದರು
 
ಎರಡನೆಯ ಸರ್ಗ / 31
 
39
 
40
 
41
 
42
 
॥ ೪೨ ॥