This page has been fully proofread once and needs a second look.

ಹುರುಳಿ ತಿಂದ ಪ್ರಸಂಗ
 

 
ತಾಯಿ ಇನ್ನೊಂದೆಡೆಗೆ ಹೋಗಬೇಕಾಯೊಯ್ತೊಮ್ಮೆ

ಸ್ತನಪಾನ ಸಾಕಷ್ಟು ಕುಡಿಸಿ ಆ ಮಗುವಿಗೆ

ತನ್ನ ಪುತ್ರಿಯ ಕೈಗೆ ಶಿಶುವನೊಪ್ಪಿಸಿದಾಕೆ

ಮಗುವ ಜಾಗ್ರತೆಯಿಂದ ನೋಡಿಕೊಳ್ಳೆಂದಳು

ಜಗವ ಸಲಹುವ ಮಗನ ಮಗಳು ಸಲಹುವ ಳೆ?

ಮೂಢನಂಬಿಕೆಯಾಯ್ತು ಮುಗ್ಧತಾಯಿಯದು
 
॥ ೩೫ ॥
 
ತಾಯಿ ಮರೆಯಾದ ತಕ್ಷಣವೇ ಮಗುವು

ಅಳುವ ಪ್ರಾರಂಭಿಸಿತು ಮತ್ತೆ ಮತ್ತೆ
 

ಮುಗುದೆ ಆ ಬಾಲಕಿ ಮಾಡಿಯಾಳೇನು ?

ಆಸ್ಪಷ್ಟ ನುಡಿಯಿಂದ ರಮಿಸಿದಳು ಶಿಶುವ

"ಅಳಬೇಡ, ಅಳಬೇಡ ಕಂದಯ್ಯ ನೀನು

ಬೇಕಾದುದೆಲವನು ತಾಯಿ ತರಲಿಹಳು
 
" ॥ ೩೬ ॥
 
ಮಗುವಿನಾ ಅಳುವೇನೂ ಹೆಚ್ಚುತ್ತ ಹೋಯಿತು

ತಾಯ ಬರುವಿಕೆಯ ಸೂಚನೆಯೇ ಇಲ್ಲ

ವ್ಯಥೆಗೊಂಡಳಾ ಬಾಲಿಲೆ ದಾರಿಗಾಣದೆ ಹೋಗಿ
 

ತಾಯಿ ಬರುವಲ್ಲಿ ಏಕಿಂತು ತಡವೋ! ಎಂದು
ಚಿಂತಿಸಿದಳು
 

ಶಿಶುವನ್ನು ಕೈಯಲ್ಲಿ ಎತ್ತಿಕೊಂಡಾ ಬಾಲೆ

ತಾಯ ಬರವನೇ ಎದುರು ನೋಡಿದಳು
 
॥ ೩೭ ॥
 
ತಾಯ ಹಾದಿಯ ನೋಡಿ ಬೇಸತ್ತ ಕನ್
 
ಯೆ
ಮುಂದೇನು ಮಾಡಲೂ ಅರಿಯದಾದಾಗ
 
ಕುಪ್ಪಾ

ಕ್ಷುದ್ಬಾ
ಧೆಯಿರಬಹುದೆಂದು ಶಂಕೆ ತಾಳಿದಳು

ಉಷ್ಣರೋಗವು ಶಿಶುವ ಕಾಡಬಹುದೆಂದಂಜಿ

ತಣ್ಣನೆಯ ಹಾಲನ್ನೇ ಊಡುತ್ತಿದ್ದಳು ತಾಯಿ

ದಿಕ್ಕುತೋರದ ಬಾಲೆ, ಬೆಂದ ಹುರುಳಿಯನುಣಿಸಿ, ಶಿಶುವ ರಮಿಸಿದಳು
 
30 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
35
 
36
 
37
 
38
 
॥ ೩೮ ॥