This page has been fully proofread once and needs a second look.

ಭೂತನಿಗ್ರಹ ಪ್ರಸಂಗ
 

 
ಅಂಜಿಕೆಯನೇ ಅರಿಯದ ಅಪರೂಪದಾ ಶಿಶುವು !
 

ಅರಳಿರುವ ಕಣ್ಣುಗಳು ತುಂಬು ಕಾಂತಿಯವು !

ಅತ್ಯಂತ ದುರ್ಲಭದ ಅಂಥ ಶಿಶುರತ್ನವನು

ಮಧ್ಯಗೇಹರು ಒಯ್ದು ಕುಲದೇವರೆಡೆಗೆ

ಅರ್ಪಿಸಿದರಾ ಶಿಶುವ ಸ್ವಾಮಿಪಾದದ ಅಡಿಗೆ

ಶ್ರೀ ಹರಿಯ ಸನ್ನಿಧಿಗೆ ವಾಯುದೇವರ ಕೊಡುಗೆ
 
॥ ೩೧ ॥
 
ರಜತ ಪೀಠಾ ಪುರದ ಅಧಿವಾಸಿ ಹರಿಗೆ

ನಮಿಸಿದರು ಮಧ್ಯಗೇಹರು ಭಕ್ತಿಯಲ್ಲಿ ಅಂದು

ಪ್ರಾರ್ಥನೆಯ ಗೈದರು ಭಯ ಭಕ್ತಿಯಿಂದ

ಬಾಲಕಗೆ ಸಂಪದವು ಲಭಿಸಲೆಂದು

ಪರಿವಾರ ಜನರೊಡನೆ ಶಿಶುವ ಕೈಯಲ್ಲಿ ಹೊತ್ತು

ತೆರಳಿದರು ಪಾಜಕಕೆ ನಡುರಾತ್ರಿಯಲ್
 
ಲೇ ॥ ೩೨ ॥
 
ನಡುರಾತ್ರಿಯಲ್ಲವರು ದಾರಿಯನ್ನು ಸವೆಸಿದರು

ದಟ್ಟ ಕಾನನದಲ್ಲಿ ಭೂತವೊಂದಾಗ /

ಪೀಡಿಸಿತು ಪರಿವಾರದೋರ್ವನನ್ನು

ಕಾರಿರುಳ ಮಧ್ಯದಲ್ಲಿ ರಕ್ತಕಾರಿದನವನು

ಅದ ನೋಡಿ ಹೀಗೆಂದ ಪರಿವಾರದಲ್ಲೊಬ್ಬ

"ಭೂತ ಪೀಡಿಸಲಿಲ್ಲ ಮಗುವನ್ನು ಏಕೋ ?"
 
॥ ೩೩ ॥
 
ಭೂತಪೀಡಿತನಲ್ಲಿ ವ್ಯಕ್ತವಾಯಿತು ಭೂತ

ಆವಿಷ್ಟನಾದವನು ಎದ್ದು ಕೂತೆಂದ

"ಈ ಕಾನನದಿ ನಾನೀಗ ವಿಹರಿಸುತ್ತಿದೆನು
ಹೆನು
ಅರ್ಧ ರಾತ್ರಿಯೊಳಿಲ್ಲಿ ನೀವೇಕೆ ಬಂದಿರಿ ?

ಸಂಹರಿಸಿ ಬಿಡುತ್ತಿದ್ದೆ ನಿಮ್ಮೆಲ್ಲರನ್ನೂ
 
ರಕ

ರಕ್ಷ
ಣೆಯ ನೀಡಿದನು ಶಿಶುವಿವನು ಲೋಕೇಶ
 
ಎರಡನೆಯ ಸರ್ಗ / 29
 
31
 
32
 
3.3
 
34
 
" ॥ ೩೪ ॥