This page has been fully proofread once and needs a second look.

ಜಾತಕರ್ಮಾದಿ
 

 
ಬಳಿಕ ಪೊಕ್ಕರು ತಮ್ಮ ಮನೆಯನ್ನು ಅವರು

ಚಂದ್ರನಂದದ ಮುಖದ ಶಿಶುವನ್ನು ಕಂಡರು
 

ಹರಿಯ ಕರುಣೆಯು ತಮಗೆ ಇಂದಾಯಿತೆಂದು
 

ನಲಿನಲಿದು ದೇವರನು ಪಾಡಿ ಪೊಗಳಿದರು

ಸದ್ಗುಣದ ಖನಿಯಾದ ಆ ಶಿಶುವಿಗವರು

ಜಾತಕರ್ಮಾದಿ ಕ್ರಿಯೆಯ ಸಾಂಗಗೊಳಿಸಿದರು
 
॥ ೨೮ ॥
 
ನಾಮಕರಣ
 

 
ಮಧ್ಯಗೇಹರು ತಮ್ಮ ಮಗುವಿಗಂದು

"ವಾಸುದೇವ " ಎಂಬ ಹೆಸರನ್ನು ಕೊಟ್ಟರು

ಜ್ಞಾನದಾಯಕನಾದ ಮುಖ್ಯಪ್ರಾ
ಣನೆ ಇವನು
ಇದರಿಂದ ಈ ಹೆಸರು ಅನ್ವರ್ಥವಾಯಿತು

ವಾಸುದೇವನ ಪದದ ಸುಖವ ಪಡೆವವಗೆ
 

ಹೆಸರು ಸರಿಯಾಯ್ಕೆಂತೆಂದು ಸುರರು ಕೊಂಡಾಡಿದರು
 
॥ ೨೯ ॥
 
ಪೂರ್ವಾಲಯರು ಮಾಡಿದ ಅಪೂರ್ವ ಸೇವೆ
 

 
ಮೂಡಿಲ್ಲಾಯ ಎಂಬೊಬ್ಬ ಪರಮ ಧಾರ್ಮಿಕನು
 

"ಶಿಶುವ ಹಾಲಿಗೆ" ಎಂದು ಗೋವ ನೀಡಿದನೊಂದ
 

ನಂತರದ ಜನ್ಮದಲ್ಲಿ ಆ ಪರಮ ದಾನಿಯು

ಜನಿಸಿ ಬಂದನು ತನ್ನ ಮಗನಿಗೆಗೇ ಮಗನಾಗಿ

ಉದ್ಧಾರ ಪಡೆದನು ಶಾಸ್ತ್ರಂಗಳಿಂದ

ದಾನ ಪಡೆವನ ಗುಣದಿಂ ದಾನಫಲವಲ್ಲವೆ ?
 
28/ ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
28
 
29
 
30
 
॥ ೩೦ ॥