This page has been fully proofread once and needs a second look.

ಶ್ರೀ ಮಧ್ಯಾಮಾರ
ವಾವತಾರ
 
ವೃದ್ಧಿಯಾಯಿತು ಗರ್ಭ, ಶುಕ್ಲಚಂದ್ರನ ತೆರದಿ

ಪ್ರಸವಕಾಲವು ಅಂದು ಸನಿಹವಾದಾಗ

ಧರೆಗಿಳಿದು ಬಂದರು, ಶ್ರೀ ವಾಯುದೇವರು

ಶ್ರೀ ಹರಿಯ ಆಣತಿಯ ಶಿರದಲ್ಲಿ ಧರಿಸಿ

ಉಡುಪಿಯಲ್ಲಿನ ಊರ ದೇವರಿಗೆ ನಮಿಸಿ

ತೆರಳಿದರು ಭಟ್ಟನ ಮನೆಯತ್ತಲವರು
 
॥ ೨೪ ॥
 
ಸಕಲ ಸಲ್ಲಕ್ಷಣದಿ ಶೋಭಿಸುವ ಪುರವನ್ನು

ಪರಮಸುಂದರವಾದ ಪುರದ ಮಂದಿರವನ್ನು

ರಾಜ ಅರಿಯನ್ನು ಹೊಡೆದಟ್ಟಿ ಹೊಗುವಂತೆ

ಶ್ರೀ ಹರಿಯ ಸುಂದರ ಮಂದಿರವ ಹೋಲುವ

ಗರ್ಭವನ್ನು ಹೊಕ್ಕರು ಶ್ರೀ ವಾಯುದೇವರು

ಆಗಲೇ ನೆಲೆಸಿದ್ದ ಜೀವನನು ಹೊಡೆದಟ್
 
ಟಿ ॥ ೨೫ ॥
 
"ಬುವಿಯಲ್ಲಿ ಅವತರಿಸಿ ಬಿಟ್ಟಿಹರು ಇಂದು

ವಾಯುದೇವರ ಭವ್ಯ ಅವತಾರವಾಗಿಹುದು

ಮುದಗೊಳಲಿ ಸಜ್ಜನರು, ದುಃಖಸಲಿ ದುರ್ಜನರು
"
ಹೀಗೆಂದು ಸಾರುವುದೊದೋ ಎಂಬಂಥ ಧ್ವನಿಯಿಂದ

ದೇವ ದುಂದುಭಿಗಳೆಲ್ಲ ಮೊಳಗಿದಾಗ

ಆ ಧ್ವನಿಯು ಮಾನವರ ಕಿವಿಗಳಿಗೂ ಬಿತ್ತು
 
॥ ೨೬ ॥
 
ಅನಂತಾಸನನನ್ನು ಆರಾಧಿಸಿದ ಬಳಿಕ

ಮನೆಗೆ ಮರಳುತ್ತಿದ್ದ ಮಧ್ಯಗೇಹರು ಅಂದು

ಕೇಳಿದರು ದುಂದುಭಿಯ ಧ್ವನಿಯನ್ನು ಆಗ

ಪುತ್ರೋತ್ಸವದ ಸಂಗತಿಯ ಆಗಲೇ ಅರಿತವರು

ನಲಿದಾಡಿ ಹೋದರು ಆನಂದದಿಂದ
 

ಪರೋಕ್ಷಜ್ಞಾನವೂ ಇಷ್ಟಸಾಧನವೆಂದು ಅರಿತರವರಾಗ
 
ಎರಡನೆಯ ಸರ್ಗ / 27
 
24
 
25
 
26
 
27
 
॥ ೨೭ ॥