This page has been fully proofread once and needs a second look.

ಶ್ರೀ ಹರಿಯ ಚರಣವನು ಸೇವಿಸಿದನವನು

ಪತ್ನಿ ಸಮೇತ, ಭಯಭಕ್ತಿ ಸಹಿತ

ಲಘುವಾಯಿತಿನ್ನಷ್ಟು ಅವನ ಭೋಗಗಳು

ನಿಗ್ರಹಿತ ಚಿತ್ರವನ್ತವನು ಮತ್ತಷ್ಟು ನಿಗ್ರಹಿಸಿ

ಪರಿಶುದ್ಧ ದೇಹವನು ಮತ್ತಷ್ಟು ಶುಚಿಗೊಳಿಸಿ

ಉತ್ತಮೋತ್ತಮವಾದ ಸೇವೆಯನ್ನು ಸಲ್ಲಿಸಿದನು
 
॥ ೨೦ ॥
 
ಸಕಲ ಗುಣ ಸಂಪನ್ನ ನೆನ್ನಿಸುವ ಮಗುವನ್ನು

ಪಡೆಯಲಿಚ್ಚಿಛಿಸಿದ ಆ ದಂಪತಿಗಳಿಬ್ಬರೂ

ಪಯೋವ್ರತ ಮುಂತಾದ ವಿವಿಧ ವ್ರತಗಳನು

ಶ್ರದ್ಧೆಯಿಂ ನಡೆಸಿದರು ಅದಿತಿ ಕಶ್ಯಪರಂತೆ

ದೇವಾಧಿದೇವನನು ವಿವಿಧ ಪೂಜೆಗಳಿಂದ
 

ಸಂತೃಪ್ತಿಗೊಳಿಸಿದರು ಭಕ್ತಿ ನಿಷ್ಠೆಗಳಿಂದ
 
॥ ೨೧ ॥
 
ಸಂತುಷ್ಟನಾದನು ಆ ಸ್ವಾಮಿ ಇದರಿಂದ

ಕರುಣಸುಧೆಯಿಂದವರ ಅಭಿಷೇಕ ಮಾಡಿದನು
 

ಸಿರಿದೇವಿ ಶ್ರೀರಮಣ ಸನ್ನಿಧಾನದಿ ಅವ
ರು
ಬೆಳಗಿದರು ಅಪ್ರತಿಮ ದೇಹ ಕಾಂತಿಯೊಳು
 

ವಿಧವಿಧದ ಉಪವಾಸ ವ್ರತಗಳಿಂದಾಗಿ

ಮಿಗಿಲಾದ ಶುದ್ದಿಧಿಯೂ ಅವರದಾಯ್ತು
 
॥ ೨೨ ॥
 
ಮಧ್ಯಗೇಹರ ಪತ್ನಿಗೆ ಗರ್ಭಾಂಕುರ
 

 
ಶುಕ್ಲ ಪಕ್ಷದೊಳೊಂದು ಪರಿಶುಭ್ರ ರಾತ್ರಿಯು

ಕತ್ತಲೆಯ ಕಿತ್ತೊಗೆವ ಚಂದ್ರಮನ ಪಡೆವಂತೆ

ಆಸೆ ಪಲ್ಲವಿಸಿದಾ ಮಧ್ಯಗೇಹರ ಪತ್ನಿ

ಶುಭ್ರವಸ್ತ್ರವ ಧರಿಸಿ, ಸೂಕ್ತ ಋತುಕಾಲದಲಿ

ಅಜ್ಞಾನ ತಿಮಿರವನು ಕಳೆವಂಥ ಗರ್ಭವನ್ನು
 
ನು
ಪತಿಯಿಂದ ಪಡೆದಳು ಜಗದ ಹಿತಕ್ಕಾಗಿ
 
26 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
20
 
21
 
22
 
23
 
॥ ೨೩ ॥