This page has not been fully proofread.

ವಿವಾಹ
 
ಪುರುಷಾರ್ಥ ಸಾಧನೆಗೆ ಯೋಗ್ಯವಾಗಿರುವ
ಯೋಗ್ಯ ಸ್ವರೂಪದಲಿ ಶೋಭಿಸುತ್ತಿರುವ
ಶ್ರೇಷ್ಠ ವರ್ಣದಿ ಕೂಡಿ ಕಂಗೊಳಿಸುತ್ತಿರುವ
ವೇದವಿದ್ಯೆಗಳೆಲ್ಲ ಮೈವೆತ್ತಿದಂತಿರುವ
 
ಶ್ರೇಷ್ಠ ಕನ್ನೆಯನೊಂದ ಬ್ರಾಹ್ಮಣೋತ್ತಮನಿಂದ
ಸ್ವೀಕರಿಸಿದನಾ ವಿಪ್ರ, ಶಾಸ್ತ್ರ ವಿಧಿಗಳ ಸಹಿತ
 
ದಾಂಪತ್ಯ
 
ಮಧ್ಯಗೇಹದ ಭಟ್ಟ, ಪರಿಶುದ್ಧ ಚಿತ್ರ
ನಾನು ನನ್ನದು ಎಂಬ ಅಭಿಮಾನ ರಹಿತ
ಆತನಾ ಪತ್ನಿಯು ಪರಮ ನಿರ್ಮಲಳು
ಉಪನಿಷತ್ತುಗಳಂತೆ, ಭಕ್ತಿ, ಮುಕ್ತಿಗಳಂತೆ
ಮಧ್ವಮುನಿಯಂತಹ ಸಂತತಿಯ ಕೊಡುವಂಥ
ಪರಮ ಪತಿವ್ರತೆಯಲ್ಲಿ ರಮಿಸಿದನು ಭಟ್ಟ
 
''ಭಟ್ಟ '' ಶಬ್ದಾರ್ಥ
 
ನಿಜಧರ್ಮರತನಾದ ಧೀರ, ಆ ಬ್ರಾಹ್ಮಣ
ತನ್ನ ಕುಲದೇವರಲಿ ಅತಿಯಾದ ಭಕ್ತಿ
ಭಾರತ, ಪುರಾಣಗಳ ಮಹಾರಹಸ್ಯಗಳ
ಅರಿತಿದ್ದನಾತ ಅತಿ ಗಾಢವಾಗಿ
ಸುಜ್ಞಾನ, ವಿನಯದಾ ಪ್ರತಿ ಮೂರ್ತಿಯವನು
ಭಯಭಕ್ತಿಯಿಂದವನನ್ನು ಭಟ್ಟ' ನಿವನೆಂದರು
ರಜತ ಪೀಠದಲ್ಲಿ ನಿತ್ಯ ಪ್ರವಚನ ಸೇವೆ
 
ಕಥನ ಕೌಶಲದಿಂದ, ವಿಷಯ ಪ್ರೌಢಿಮೆಯಿಂದ
ಶ್ರೀ ಹರಿಯ ಚಂದದ ಕಥೆಯೆಂಬ ಸುಧೆಯಿಂದ
ಜನರ ಶ್ರವಣಾದಿ ಇಂದ್ರಿಯಗಳನಲ್ಲದೆ
ರಜತ ಪೀಠಾಪುರದ ಊರ ದೇವರ ಕೂಡ
ಸೇವೆಗೈಯುತಲಿದ್ದ ದೇವ ಗಣದೆಲ್ಲರ
ಕರ್ಣೇಂದ್ರಿಯಗಳನವನು ತಣಿಸುತ್ತಿದ್ದ
 
24 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
12
 
13
 
14
 
15