This page has been fully proofread once and needs a second look.

ಇಂತು ಆ ಪುರುಷನಲಿ ಆವಿಷ್ಟನಾದ

ಭಗವಂತ ತನ್ನೆರಡು ತೋಳುಗಳ
ನೆತ್ತಿ
ಏರುಸ್ವರದಲ್ಲಿ ನುಡಿದ ಜನನಿವಹದತ್ತ

"ಜಗದ ಜನಕೆಲ್ಲ ಮಂಗಳವನೀವ

ಎಲ್ಲ ತತ್ವವ ಬಲ್ಲ ಸುಜ್ಞಾನಿಯೊಬ್ಬ

ಶೀಘ್ರದಲ್ಲಿ ಇಲ್ಲಿಯೇ ಅವತರಿಸಲಿರುವ
 
॥ ೮ ॥
 
ಮಧ್ಯಗೇಹ ಭಟ್ಟರ ಪೂರ್ವೋತ್ತರ
 

 
ಏಳು ದ್ವೀಪಗಳಿಂದ, ಏಳು ಜಲಧಿಗಳಿಂದ

ಕೂಡಿರುವ ನಮ್ಮದೀ ಭೂಮಂಡಲ

ಇದರ ಮಧ್ಯದಲಿಹುದು ಜಂಬೂದ್ವೀಪ

ಕರ್ಮಬುವಿ ಎನಿಸಿಹುದು ಭರತಖಂಡ

ಇಲ್ಲೊಬ್ಬ ಬ್ರಾಹ್ಮಣನು ಕಲಿಯುಗದಿ ಜನಿಸಿಹನು

ಮಧ್ಯಗೇಹರ ಕುಲದ ಬ್ರಾಹ್ಮಣೋತ್ತಮನು
 
॥ ೯ ॥
 
ಅವರ ಮೂಲಸ್ಥಳ
 

 
ಆ ಭೂಸುರನ ಮೂಲ, ಶಿವಳ್ಳಿ ಗ್ರಾಮ

ಕಂಗೊಳಿಸುತ್ತಿತ್ತು ಆ ಗ್ರಾಮವೆಂದು
 
ವಂದು
ರಜತ ಪೀಠದ ನಾಥ ಅನಂತಾಸನನಿಂದ
 

ವೇದಗಿರಿ ಎಂಬೊಂದು ಬೆಟ್ಟದಿಂದ

ಇಲಾವೃತವೆಂಬೊಂದು ಖಂಡದಂತೆ

ಮೇರು ಗಿರಿ ರುದ್ರರ ಸಮ್ಮಿಲನದಂತೆ
 
॥ ೧೦ ॥
 
ವಾಸಸ್ಥಳ
 

 
ಪಾಜಕವೆಂಬೊಂದು ದಿವ್ಯಕ್ಷೇತ್ರ

ಮೂರು ಕುಲಗಳಿಗೆ ಅದು ಧ್ವಜದ ಪರಿ ಇಹುದು

ಭಾರ್ಗವನು ದುರ್ಗೆಯನು ಸ್ಥಾಪಿಸಿದ ಕ್ಷೇತ್ರ

ವಿಮಾನಗಿರಿಯಿಂದ ಶೋಭೆ ಪಡೆದಿಹ ಕ್ಷೇತ್ರ

ವಿಶ್ವ ಪಾಲಕನಿಂದ ಜಲವ ಗಳಿಸಿದ ಕ್ಷೇತ್ರ

ಆ ಬ್ರಾಹ್ಮಣನು ನೆಲೆಸಿದನು ಈ ಕ್ಷೇತ್ರದಲ್ಲಿ
 
ಎರಡನೆಯ ಸರ್ಗ / 23
 
8
 
9
 
10
 
11
 
॥ ೧೧ ॥